ಇಟಲಿಯ ಕ್ಯಾಲಬ್ರಿಯಾದಲ್ಲಿ ನಿರಾಶ್ರಿತರ ದೋಣಿ ಮುಳುಗಿ 59 ಸಾವು,ದೋಣಿಯಲ್ಲಿ ಸುಮಾರು 150 ಮಂದಿ ಇದ್ದರು ಎಂದು ವರದಿಯಾಗಿದೆ .ಇನ್ನುಳಿದವರನ್ನು ಪತ್ತೆ ಹಚ್ಚಲು ಶೋಧ ಕಾರ್ಯ ನಡೆಯುತ್ತಿದೆ. ಮೃತರಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ. 27 ಮಂದಿಯ ಮೃತದೇಹಗಳು ದಡದಲ್ಲಿ ಕೊಚ್ಚಿಹೋಗಿವೆ.
ದೋಣಿಯಲ್ಲಿ ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಜನರು ಇದ್ದರು. ಇಳಿಯಲು ಸ್ವಲ್ಪ ದೂರ ಇದ್ದಾಗ ಅವಘಡ ಸಂಭವಿಸಿದೆ. ಹವಾಮಾನ ವೈಪರೀತ್ಯ ಹಾಗೂ ಬೋಟ್ ಬಂಡೆಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ.
ಅದೇ ಸಮಯದಲ್ಲಿ, ನಿರಾಶ್ರಿತರ ಅಕ್ರಮ ಆಗಮನವನ್ನು ಕಟ್ಟುನಿಟ್ಟಾಗಿ ತಡೆಯಲಾಗುವುದು ಎಂದು ಇಟಲಿಯ ಆಂತರಿಕ ಸಚಿವ ಮ್ಯಾಟಿಯೊ ಪಿಯಾಂಟೆಡೋಸಿ ಹೇಳಿದ್ದಾರೆ.
ನಿರಾಶ್ರಿತರು ಇಟಲಿಯ ಮೆಡಿಟರೇನಿಯನ್ ಸಮುದ್ರದ ಮೂಲಕ ಯುರೋಪಿಗೆ ಆಗಮಿಸುತ್ತಾರೆ. ಇದು ಅತ್ಯಂತ ಅಪಾಯಕಾರಿ ಜಲಮಾರ್ಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


