ನಾಸಿಕ್: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿದೆ ಆದರೆ ಈ ಮಾತಿಗೆ ತಕ್ಕಂತೆ 3 ಅಡಿ ಎತ್ತರದ ಮಹಿಳೆ ಪೂಜಾ ಘೋಡ್ಕೆ ಅವರು ತಾನೇ ಸ್ವಂತ ಉದ್ಯಮವನ್ನು ಆರಂಭಿಸಿ ಇತರ ಮಹಿಳೆಯರಿಗೆ ಉದ್ಯೋಗವನ್ನು ನೀಡಿ ಯಶಸ್ವಿ ಮಹಿಳೆಯಾಗಿದ್ದಾರೆ.
ಪೂಜಾ ಘೋಡ್ಕೆ ಹಲವಾರು ತೊಂದರೆಗಳನ್ನು ಎದುರಿಸಿದ್ದಾರೆ. ಪೂಜಾ ಜೀವನದಲ್ಲಿ ಏನು ಮಾಡುತ್ತಾಳೆ ಎಂಬುದು ಮನೆಯವರ ಆತಂಕ ಮತ್ತು ನರೆಹೊರೆಯವರ ಪ್ರಶ್ನೆಯಾಗಿತ್ತು. ಅಲ್ಲದೇ ಕಡಿಮೆ ಎತ್ತರದ ಕಾರಣದಿಂದ ಅನೇಕರು ಪೂಜಾರನ್ನು ಹೀಯಾಳಿಸುತ್ತಿದ್ದರು . ಅಂತಹ ಪರಿಸ್ಥಿತಿಯಲ್ಲಿ ಪೂಜಾಳ ಪೋಷಕರು ಅವಳ ಬೆಂಬಲವಾಗಿ ನಿಂತು, ಉತ್ತಮ ಶಿಕ್ಷಣ ಕೊಡಿಸಿದ್ದಾರೆ.
ಆದ್ದರಿಂದ ಪೂಜಾ ಎಂಕಾಂ ಪದವೀಧರೆಯಾಗಿದ್ದಾರೆ. ಬಳಿಕ ಪೂಜಾ ಉದ್ಯೋಗಕ್ಕಾಗಿ ಹಲವಾರು ಕಂಪನಿಗಳ ಸಂದರ್ಶನವನ್ನು ಎದುರಿಸಿದರು.ಆದರೆ ಪೂಜಾಳ ಎತ್ತರವನ್ನು ನೋಡಿ ಕಂಪನಿಗಳು ಇವರನ್ನು ರಿಜೆಕ್ಟ್ ಮಾಡುತ್ತಿದ್ದವು. ಇದರಿಂದ ಪೂಜಾಳ ಪೋಷಕರು ಚಿಂತೆಗೀಡಾಗಿದ್ದರು. ಮಗಳಿಗೆ ಉತ್ತಮ ಉದ್ಯೋಗ ಸಿಕ್ಕು ಯಾರ ಹಂಗು ಇಲ್ಲದೇ ಬದುಕುತ್ತಾಳೆ ಎಂದುಕೊಂಡಿದ್ದ ಅವರ ಆಸೆ ನಿರಾಸೆಯಾಯಿತು ಎಂದು ಕೊರಗುತ್ತಿದ್ದರು.
ಆದರೆ ಛಲಬಿಡದೆ ಪೂಜಾ ಏನಾದರು ಸಾಧನೆ ಮಾಡಬೇಕೆಂದು ತೀರ್ಮಾನ ಮಾಡಿದರು ತಾವೇ ಒಂದು ಉದ್ಯಮ ಆರಂಭಿಸಲು ನಿರ್ಧರಿಸಿದರು. ಹಲವಾರು ವ್ಯವಹಾರಗಳ ಬಗ್ಗೆ ತಿಳಿದುಕೊಂಡಿದ್ದ ಪೂಜಾ ಬ್ಯಾಂಕಿನಲ್ಲಿ ಸಾಲ ಪಡೆದು ಪಾಪಡ್ (ಹಪ್ಪಳ) ವ್ಯಾಪಾರ ಆರಂಭಿಸಿದರು. ತನ್ನ ಕಠಿಣ ಪರಿಶ್ರಮ ದಿಂದ ಮತ್ತು ಅವರ ದೃಢಸಂಕಲ್ಪದಿಂದಾಗಿ ಯಶಸ್ವಿ ಉದ್ಯಮಿಯಾದರು.
ಈ ಕುರಿತು ಮಾಹಿತಿ ನೀಡಿದ ಪೂಜಾ, ನಾನು ಎತ್ತರ ಕಡಿಮೆ ಇದ್ದರಿಂದ ಹೇಗೆ ಬದುಕುತ್ತೇನೆ ಎಂದು ಪೋಷಕರು ನಿರಂತರವಾಗಿ ಚಿಂ ತೆ ಮಾಡುತ್ತಿದ್ದರು. ನಾನು ಎತ್ತರ ಕಡಿಮೆಯಾದರೂ, ಬುದ್ಧಿವಂತೆ ಆಗಿದ್ದೆ. ಹಾಗಾಗಿ ನನ್ನ ತಾಯಿ ನನಗೆ ಶಿಕ್ಷಣ ನೀಡಲು ಮುಂದಾದರು. ಅಲ್ಲದೇ ಎತ್ತರ ಕಡಿಮೆ ಎಂದು ಯಾರೂ ಹೀಯಾಳಿಸದಿರಲಿ ಎಂದು ನನ್ನನ್ನು ಮಹಿಳೆಯರ ಕಾಲೇಜಿಗೆ ಸೇರಿಸಿದರು. ಆದರೂ ಅಲ್ಲಿಯೂ ನನಗೆ ಒಂದಿಷ್ಟು ಕೆಟ್ಟ ಅನುಭವಗಳು ಎದುರಾದವು. ಆದರೆ, ಅದನ್ನು ನಿರ್ಲಕ್ಷಿಸಿ ಎಂ.ಕಾಂ ವರೆಗೆ ಓದು ಮುಗಿಸಿದೆ. ಬಳಿಕ ನಾನು ಬ್ಯಾಂಕಿನಲ್ಲಿ ಕೆಲಸ ಮಾಡಲು ಬಯಸಿದ್ದೆ. ಅದಕ್ಕಾಗಿ ಹಲವು ಪರೀಕ್ಷೆಗಳನ್ನು ತೆಗೆದುಕೊಂಡೆ ಆದರೆ ಅನುತ್ತೀರ್ಣನಾದೆ ಅಂತಾರೆ ಪೂಜಾ.
ನನ್ನ ತಂದೆ ಸಣ್ಣ ಉದ್ಯಮವನ್ನು ಮಾಡುತ್ತಿದ್ದರು. ನಾನು ಅದರೊಂದಿಗೆ ಏನಾದರೂ ಮಾಡಬೇಕೆಂದು ಯೋಚನೆಮಾಡುತ್ತಿದ್ದೆ . ನನ್ನ ಕುಟುಂಬದ ಸದಸ್ಯರೂ ನನಗೆ ಬೆಂಬಲ ನೀಡಿದರು. ನಾನು ದೊಡ್ಡ ಮಟ್ಟದಲ್ಲಿ ವ್ಯಾಪಾರ ಮಾಡಲು ಬಯಸಿದಾಗ, ನನಗೆ ತುಂಬಾ ಹಣದ ಅಗತ್ಯವಿತ್ತು. ನಂತರ ನಾನು ಬ್ಯಾಂಕಿನ ಸಹಾಯವನ್ನು ತೆಗೆದುಕೊಂಡೆ. ಇಂದು ನನ್ನ ಪಾಪಡ್ ಉದ್ಯಮ ನಡೆಯುತ್ತಿದೆ. ಅಲ್ಲದೆ ನನ್ನಿಂದಾಗಿ ಇತರ ಮಹಿಳೆಯರಿಗೆ ಉದ್ಯೋಗ ನೀಡಿದ ಖುಷಿ ನನಗೆ ಇದೆ ಎಂದು ಪೂಜಾ ಹೇಳುತ್ತಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA