ಬಿಬಿಎಂಪಿ ಶಾಲೆ ಗುಣಮಟ್ಟ ಹೆಚ್ಚಳಕ್ಕೆ ತಜ್ಞರ ಮೊರೆ ಹೋಗಲಾಗಿದೆ. ಕೊರೋನಾ ಬಳಿಕ ಶಾಲೆ-ಕಾಲೇಜುಗಳಿಗೆ ಮಕ್ಕಳ ದಾಖಲಾತಿ ಹೆಚ್ಚಳ ಮಾಡಬೇಕಾಗಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಿದ ಪಾಲಿಕೆ, ಹತ್ತನೇ ತರಗತಿ ಹಾಗೂ ಪಿಯುಸಿ ಫಲಿತಾಂಶ ಹೆಚ್ಚಳಕ್ಕಾಗಿ ಸಲಹೆಗಾರರನ್ನು ನೇಮಿಸಿಕೊಳ್ಳಲು ಸಂದರ್ಶನ ನಡೆಸುತ್ತಿದೆ.
ಕೊರೋನಾ ಬಳಿಕ ದಾಖಲಾತಿ ಪ್ರಮಾಣ 17 ಸಾವಿರದಿಂದ 23 ಸಾವಿರಕ್ಕೆ ಏರಿಕೆ ಆಗಿದೆ. ಬಿಬಿಎಂಪಿ ಶಾಲಾ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮಾಡುವುದು ಅನಿವಾರ್ಯವಾಗಿದ್ದು, 25 ಸಾವಿರ ವಿದ್ಯಾರ್ಥಿಗಳ ದಾಖಲು ಗುರಿಯನ್ನು ಪಾಲಿಕೆ ಹೊಂದಿದೆ.
ಬಿಬಿಎಂಪಿ ಶಾಲಾ ಕಾಲೇಜಿನ ದಾಖಲಾತಿ ವಿವರ:
ಹಂತ – ವಿದ್ಯಾರ್ಥಿಗಳ ಸಂಖ್ಯೆ
ಶಿಶು ವಿಹಾರ: 3,751
ಪ್ರಾಥಮಿಕ ಶಾಲೆ: 3,744
ಪ್ರೌಢ ಶಾಲೆ: 7,636
ಪದವಿ ಪೂರ್ವ: 4,105
ಪದವಿ: 1298
ಸ್ನಾತಕೋತ್ತರ ಪದವಿ: 88
ಒಟ್ಟು: 20,622
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


