ಉತ್ತರ ಪ್ರದೇಶದ ಗೊಂಡಾ ಬಳಿ ಚಂಡೀಗಢ– ದಿಬ್ರುಗಢಕ್ಕೆ ತೆರಳುತ್ತಿದ್ದ ಎಕ್ಸ್’ಪ್ರೆಸ್ ಪ್ರಯಾಣಿಕ ರೈಲಿನ ಹಲವು ಬೋಗಿಗಳು ಗುರುವಾರ ಹಳಿತಪ್ಪಿದ್ದು, ಪರಿಣಾಮವಾಗಿ 4 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ,
ಮೋತಿಗಂಜ್–- ಜಿಲ್ಹಾಹಿ ರೈಲು ನಿಲ್ದಾಣಗಳ ನಡುವೆ 15904 ಸಂಖ್ಯೆಯ ಚಂಡೀಗಢ– ದಿಬ್ರುಗಢ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದ್ದು, ಈ ವೇಳೆ ರೈಲಿನ ಹಲವು ಬೋಗಿಗಗಳಿಗೆ ಹಾನಿಯಾಗಿದೆ. ಹಿರಿಯ ರೈಲ್ವೆ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಚರಣೆ ಮುಂದುವರಿದಿದೆ.
ಒಟ್ಟು 12 ಬೋಗಿಗಳೊಂದಿಗೆ ರೈಲು ಸಂಚರಿಸುತ್ತಿತ್ತು. ಈ ಪೈಕಿ ನಾಲ್ಕು ಬೋಗಿಗಳು ಜುಲಾಹಿ ರೈಲ್ವೆ ನಿಲ್ದಾಣದ ಕೆಲವು ಕಿಲೋಮೀಟರ್ ಮೊದಲು ಹಳಿ ತಪ್ಪಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಿಎಂ ಯೋಗಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಶಾನ್ಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA