ಪ್ರಾಣ ಪ್ರತಿಷ್ಠೆಯ ನಂತರ ಅಯೋಧ್ಯೆಯಲ್ಲಿ ಭಕ್ತರ ದಂಡು ಹರಿದಿದೆ. 23ರಿಂದ ದರ್ಶನಕ್ಕೆ ಜನರಿಗೆ ಪ್ರವೇಶ ಕಲ್ಪಿಸಲಾಗಿತ್ತು. ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರ ನಿರಂತರ ಹರಿವನ್ನು ಗಮನದಲ್ಲಿಟ್ಟುಕೊಂಡು ಶ್ರೀ ರಾಮ ಜನ್ಮಭೂಮಿ ತೀರ್ಥ ದೇವಸ್ಥಾನ ಟ್ರಸ್ಟ್ ದರ್ಶನ ಮತ್ತು ಆರತಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ಬೆಳಗ್ಗೆ 4.30ಕ್ಕೆ ಶೃಂಗಾರ ಆರತಿ, 6.30ಕ್ಕೆ ಮಂಗಳ ಆರತಿ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದಲೇ ಭಕ್ತರು ದರ್ಶನಕ್ಕಾಗಿ ದೇವಸ್ಥಾನವನ್ನು ಪ್ರವೇಶಿಸಬಹುದು. ಲೈವ್ ಮಿಂಟ್ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡಿದೆ.
ಮಧ್ಯಾಹ್ನ ಭೋಗ್ ಆರತಿ ಹಾಗೂ ರಾತ್ರಿ 7.30ಕ್ಕೆ ಸಂಜೆ ಆರತಿ ನಡೆಯಲಿದೆ. ರಾತ್ರಿ 8 ಗಂಟೆಗೆ ಎರಡನೇ ಹಂತದ ಭೋಗ್ ಆರತಿ ನಡೆಯಲಿದೆ. ರಾತ್ರಿ 10 ಗಂಟೆಗೆ ಸಾಯನ ಆರತಿಯೊಂದಿಗೆ ಒಂದು ದಿನದ ಪೂಜೆಗಳು ಮುಕ್ತಾಯಗೊಳ್ಳಲಿವೆ. ಪ್ರಧಾನಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭಗಳು ನಡೆದವು.


