nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ

    February 21, 2026

    ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

    February 21, 2026

    ಶೇ.99ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ

    February 21, 2026
    Facebook Twitter Instagram
    ಟ್ರೆಂಡಿಂಗ್
    • ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ
    • ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು
    • ಶೇ.99ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ
    • ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ
    • ಪಂಚ ಗ್ಯಾರೆಂಟಿ, ‘ಲಂಚ ಗ್ಯಾರೆಂಟಿ’: ಸತೀಶ್ ಜಾರಕಿಹೊಳಿ ಹೇಳಿಕೆಯಲ್ಲೇ ಭ್ರಷ್ಟಾಚಾರಕ್ಕೆ ಸಾಕ್ಷಿ: ಬಿ.ವೈ.ವಿಜಯೇಂದ್ರ ವಾಗ್ದಾಳಿ
    • ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ
    • ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ
    • ಸಾರ್ವಜನಿಕರ ರಸ್ತೆಗೆ ಕಾಂಪೌಂಡ್ ನಿರ್ಮಾಣ: ತೆರವಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಮನವಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಹಸ್ಯ ಕಾರ್ಯಾಚರಣೆಯಲ್ಲಿ 108 ಆ್ಯಂಬುಲೆನ್ಸ್ ಸೇವೆಯ ವೈಫಲ್ಯವನ್ನು ಬಯಲು ಮಾಡಿದ ತಹಶೀಲ್ದಾರ್ ನಾಹಿದಾ!
    ಕೊರಟಗೆರೆ December 12, 2022

    ರಹಸ್ಯ ಕಾರ್ಯಾಚರಣೆಯಲ್ಲಿ 108 ಆ್ಯಂಬುಲೆನ್ಸ್ ಸೇವೆಯ ವೈಫಲ್ಯವನ್ನು ಬಯಲು ಮಾಡಿದ ತಹಶೀಲ್ದಾರ್ ನಾಹಿದಾ!

    By adminDecember 12, 2022No Comments2 Mins Read
    nahida jam jam
    • ಮಂಜುಸ್ವಾಮಿ.ಎಂ.ಎನ್, ಕೊರಟಗೆರೆ.

    ಕೊರಟಗೆರೆ: ಜನ ಸ್ನೇಹಿ ತಹಶೀಲ್ದಾರ್ ಎಂದೇ ಹೆಸರು ಪಡೆದಿರುವ ತುಮಕೂರು ಜಿಲ್ಲೆ ಕೊರಟಗೆರೆಯ ತಹಶೀಲ್ದಾರ್ ನಾಹೀದಾ ಜಮ್ ಜಮ್ ಅವರು, ಮಾರುವೇಷದಲ್ಲಿ  ರಹಸ್ಯ ಕಾರ್ಯಾಚರಣೆ ನಡೆಸಿದ್ದು, 108 ತುರ್ತು ಸೇವೆಯ ನಿರ್ವಹಣೆ ವೈಫಲ್ಯವನ್ನು ಬಯಲು ಮಾಡಿದ್ದಾರೆ.

    ಚಿರತೆ ದಾಳಿಯಿಂದ ಗಾಯಗೊಂಡು ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತರು ಮತ್ತು ಮಕ್ಕಳ ಆರೋಗ್ಯ ವಿಚಾರಣೆಗೆ ಬಂದ ನಾಹಿದಾ  ಅವರ ಬಳಿ ತುರ್ತು ಆರೋಗ್ಯ ಸೇವೆ 108 ಕುರಿತು ದೂರು ನೀಡಿದ್ದರು. ಚಿರತೆ ದಾಳಿ ಸಂದರ್ಭದಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯದ ಕುರಿತು ವಿವರಿಸಿ ಕಣ್ಣೀರು ಹಾಕಿದ್ದರು.


    Provided by
    Provided by

    ಈ ಹಿನ್ನೆಲೆಯಲ್ಲಿ 108 ಕ್ಕೆ ರಾಮಕ್ಕನ ಹೆಸರಿನಲ್ಲಿ ವಡ್ಡಗೆರೆ ಕ್ರಾಸ್ ಬಳಿ ಅಪಘಾತ ಆಗಿದೆ ಎಂದು  ತಹಶೀಲ್ದಾರ್ ಕರೆ ಮಾಡ್ತಾರೆ.  2 ನಿಮಿಷ 108 ಗ್ರಾಹಕ ಸೇವಾಕೇಂದ್ರದ ಸಿಬ್ಬಂದಿ ಮಾಹಿತಿ ಪಡೆಯುತ್ತಾರೆ. ನಂತರ ಕರೆಯು ಆಂಬ್ಯುಲೆನ್ಸ್ ಸಿಬ್ಬಂದಿಗೆ ವರ್ಗಾವಣೆ ಆಗುತ್ತದೆ. ಆಂಬ್ಯುಲೆನ್ಸ್ ಸಿಬ್ಬಂದಿ ಉಮಾದೇವಿಯ ಜೊತೆ 8 ನಿಮಿಷ ತಹಶೀಲ್ದಾರ್ ಮಾತನಾಡುತ್ತಾರೆ. ಒಟ್ಟು 10 ನಿಮಿಷ ದೂರವಾಣಿ ಕರೆಯಲ್ಲಿಯೇ ಕಾಲಕಳೆದು, 1 ಗಂಟೆ ತಡವಾಗಿ ಬರ್ತಿವಿ ಕಾಯಿರಿ ಅಥವಾ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿ ಎಂಬ ಉಢಾಪೆಯ ಉತ್ತರ ಸಿಬ್ಬಂದಿ ನೀಡ್ತಾರೇ.

    108 ಗ್ರಾಹಕ ಪ್ರತಿನಿಧಿ ಜೊತೆ 2 ನಿಮಿಷ,  ಆಂಬ್ಯುಲೆನ್ಸ್ ಸಿಬ್ಬಂದಿ ಜೊತೆ 7 ನಿಮಿಷ ಸಂಭಾಷಣೆಯ ವೇಳೆ ಆ್ಯಂಬುಲೆನ್ಸ್ ಸಿಬ್ಬಂದಿ, 1 ಗಂಟೆ ಆಗುತ್ತೆ, ಕಾಯ್ತಿರಾ? ಎಂದು ಪ್ರಶ್ನಿಸಿದ್ದಾರೆ. ತೋವಿನಕೆರೆಯಿಂದ ಕೊರಟಗೆರೆ ಪಟ್ಟಣಕ್ಕೆ ಆಗಮಿಸಲು ಕೇವಲ  20 ನಿಮಿಷ ಸಾಕು, ಆದರೆ ತಹಶೀಲ್ದಾರ್ ಕರೆ ಮಾಡಿ 56 ನಿಮಿಷಗಳ ಬಳಿಕ ಸ್ಥಳಕ್ಕೆ ಆ್ಯಂಬುಲೆನ್ಸ್ ತಲುಪಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಡಿಹೆಚ್‌ ಓಗೆ ದಾಖಲೆ ಸಹಿತ ದೂರು ನೀಡಲಾಗಿದೆ.

    5 ತುರ್ತುವಾಹನ ಇದ್ರೂ ನಿರ್ವಹಣೆ ಇಲ್ಲ:

    ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತುರ್ತುವಾಹನ, ನಗುಮಗು, 108 ತುರ್ತುವಾಹನ ಇದೆ. ತೋವಿನಕೆರೆ ಮತ್ತು ಕೋಳಾಲದಲ್ಲಿ ತಲಾ ಒಂದು 108 ವಾಹನ ಸೌಲಭ್ಯವಿದೆ. ನಿರ್ವಹಣೆ ವಿಫಲವಾಗಿ ತುರ್ತುವೇಳೆ 108 ವಾಹನ ಕೆಲಸ ಮಾಡುವುದೇ ಇಲ್ಲ. ಆಸ್ಪತ್ರೆಯ ಮುಖ್ಯಾಧಿಕಾರಿ ಅಥವಾ ಟಿಹೆಚ್ ‌ಓ ಆಂಬ್ಯುಲೇನ್ಸ್ ಸಿಬ್ಬಂದಿಗಳಿಗೆ ಸಮಸ್ಯೆಯ ಬಗ್ಗೆ ಪ್ರಶ್ನಿಸುವ ಹಾಗೇ ಇಲ್ಲ. ಸಿಬ್ಬಂದಿಗಳ ನಿರ್ಲಕ್ಷದಿಂದ ಗ್ರಾಮೀಣ ಪ್ರದೇಶದ ಬಡಜನರಿಗೆ ಪ್ರಾಣಸಂಕಟ ಎದುರಾಗಿದೆ.

    108 ಮೇಲೆ ಆರೋಪಗಳ ಸುರಿಮಳೆ:

    ಅಪಘಾತ ಆದಾಗ, ಹೆರಿಗೆಯ ವೇಳೆ, ಸರ್ಜರಿ ತುರ್ತುವೇಳೆ, ರಾತ್ರಿ ಪಾಳೇಯದಲ್ಲಿ ತುರ್ತುವಾಹನ ಸಿಗೋದೇ ಅಪರೂಪ.. 108 ವಾಹನ ಎಲ್ಲಿ ನಿಂತಿರುತ್ತೆ?  ಅದರ ಜವಾಬ್ದಾರಿ ಯಾರದ್ದು? ನಿರ್ವಹಣೆ ಮಾಡೋರು ಯಾರು? ಎಂಬುದೇ ಯಕ್ಷಪ್ರಶ್ನೆ ಆಗಿದೆ. ಬಡಜನರಿಗೆ ಆರೋಗ್ಯ ಸೇವೆ ಸಲ್ಲಿಸುವ 108 ವಾಹನಗಳು ಪೇಟ್ರೋಲ್ ಬಂಕ್ ಮುಂಭಾಗ, ಡಾಬಾಗಳ ಮುಂದೆ ಅಥವಾ ರಾಜ್ಯ ಹೆದ್ದಾರಿಯಲ್ಲಿ ನಿಂತಿರುತ್ತೇ ಎಂಬುದೇ ಸ್ಥಳೀಯರ ಆರೋಪವಾಗಿದೆ.

    ಅನಗತ್ಯ ಚರ್ಚೆ ಮಾಡ್ತಾರೇ 108 ಸಿಬ್ಬಂದಿ..

    ತುರ್ತುಸೇವೆಗಾಗಿ ಜನರು 108 ಕ್ಕೆ ಕರೆಮಾಡಿದರೇ ಸ್ವೀಚ್‌ಆಪ್ ಬರೋದು, ಬ್ಯುಸಿ ಬರೋದು ಸರ್ವೇ ಸಾಮಾನ್ಯ ಆಗಿದೆ. ಇನ್ನೂ ಕರೆ ಕನೇಕ್ಟ್ ಆದರೇ 108 ಗ್ರಾಹಕ ಸಿಬ್ಬಂದಿ 2 ನಿಮಿಷ ಮಾಹಿತಿ ಪಡಿತಾರೇ ನಂತರ 108 ಸಿಬ್ಬಂದಿಗೆ ದೂರವಾಣಿ ಕರೆ ವರ್ಗಾವಣೆ ಆಗುತ್ತೇ. ಗ್ರಾಹಕ ಸೇವಾ ಸಿಬ್ಬಂದಿ ಮತ್ತು ಆಂಬ್ಯುಲೇನ್ಸ್ ಸಿಬ್ಬಂದಿ ಇಬ್ಬರು ಅನಗತ್ಯ ಚರ್ಚೆಗೆ ಇಳಿದು ಪ್ರಶ್ನೆಗಳ ಸುರಿಮಳೆಯನ್ನು ಕೇಳ್ತಾರೇ. ಮತ್ತೇ ಕೊನೆಗೆ 1 ಗಂಟೆ ಆಗುತ್ತೇ ಕಾಯ್ತೀರಾ ಅಥವಾ ಖಾಸಗಿ ವಾಹನದಲ್ಲಿ ಹೋಗ್ತೀರಾ ಎಂಬ ಪ್ರಶ್ನೆಯನ್ನು ಕೇಳುವುದು ಸಾಮಾನ್ಯವಾಗಿದೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಕೊರಟಗೆರೆ ಪೊಲೀಸರಿಂದ ಭರ್ಜರಿ ಬೇಟೆ: ಅಂತಾರಾಜ್ಯ ಮೊಬೈಲ್ ಪೋನ್ ಕಳ್ಳರ ಬಂಧನ

    February 20, 2026

    ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ

    February 19, 2026

    ಶ್ರೀ ಸಂತ ಸೇವಾಲಾಲ್ ರವರ ಆದರ್ಶ ತತ್ವ ಪಾಲಿಸಿ: ತಹಶೀಲ್ದಾರ್ ಕೆ.ಮಂಜುನಾಥ್

    February 19, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ

    February 21, 2026

    ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬಸ್‌ ಗಳಿಗಾಗಿ ಕಾಯುವ ಪ್ರಯಾಣಿಕರಿಗೆ ಸೂಕ್ತ ತಂಗುದಾಣಗಳಿಲ್ಲದೆ ತೀವ್ರ ತೊಂದರೆಯಾಗುತ್ತಿದೆ.…

    ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

    February 21, 2026

    ಶೇ.99ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ

    February 21, 2026

    ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ

    February 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.