ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಹಕರಿಗೆ ದಾಖಲೆಗಳನ್ನು ಹಿಂದಿರುಗಿಸುವ ವಿಳಂಬದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ದಾಖಲೆಗಳನ್ನು ಹಿಂದಿರುಗಿಸಲು ವಿಳಂಬವಾದಲ್ಲಿ, ಗ್ರಾಹಕರಿಗೆ ದಿನಕ್ಕೆ ಐದು ಸಾವಿರ ರೂಪಾಯಿ ಪರಿಹಾರವನ್ನು ನೀಡಲು ಆರ್ ಬಿಐ ಮುಂದಾಗಿದೆ.
ಸಾಲ ಮರುಪಾವತಿ ಮುಗಿದ ನಂತರ ದಾಖಲೆಗಳನ್ನು ಸಲ್ಲಿಸದಿರುವ ಬಗ್ಗೆ ಆರ್ ಬಿಐ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಬ್ಯಾಂಕ್ ಗಳ ಹೊರತಾಗಿ, ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳಿಗೂ ಈ ನಿರ್ದೇಶನ ಅನ್ವಯಿಸುತ್ತದೆ. ಸ್ಥಿರಾಸ್ತಿ ಸಾಲಗಳ ಮರುಪಾವತಿಯನ್ನು ಪೂರ್ಣಗೊಳಿಸಿದ ನಂತರ ಬ್ಯಾಂಕ್‌ಗಳು ಸಾಧ್ಯವಾದಷ್ಟು ಬೇಗ ದಾಖಲೆಗಳನ್ನು ಹಿಂದಿರುಗಿಸಬೇಕು.
ಬ್ಯಾಂಕ್‌ಗಳು ಸಾಲ ಮಂಜೂರಾತಿ ಪತ್ರದಲ್ಲಿ ದಾಖಲೆಗಳನ್ನು ಹಿಂದಿರುಗಿಸಲು ಸಮಯ ಮಿತಿಯನ್ನು ನಮೂದಿಸಬೇಕು. ದಾಖಲೆಗಳನ್ನು ಹಿಂದಿರುಗಿಸಲು ಗರಿಷ್ಠ ಸಮಯ 30 ದಿನಗಳು. ಹೊಸ ಮಾರ್ಗಸೂಚಿಗಳು ಡಿಸೆಂಬರ್ 1 ರಿಂದ ಜಾರಿಗೆ ಬರಲಿವೆ.


