ಸರಗೂರು: ತಾಲೂಕಿನ ತಹಶೀಲ್ದಾರ್ ಕಚೇರಿಗೆ ಸೋಮವಾರ ಬೆಳಿಗ್ಗೆ ಬಂದಂತಹ 2 ಆರ್ ಡಿ ಎಕ್ಸ್ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಮೇಲ್ ಸಂದೇಶ ಕೆಲಕಾಲ ಆತಂಕಕ್ಕೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಲ್ಲಿ ಕಾರಣವಾಗಿತ್ತು.
ತಹಶೀಲ್ದಾರ್ ಕಚೇರಿಯಲ್ಲಿ ಶೀಘ್ರದಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಲಿದೆ. ಎಲ್ಲರನ್ನೂ ತಕ್ಷಣ ತೆರವುಗೊಳಿಸಿ’ ಎಂಬ ಶೀರ್ಷಿಕೆಯನ್ನು ಕನ್ನಡದಲ್ಲಿ ಉಲ್ಲೇಖಿಸಿ, ಗೈನಾ ರಮೇಶ್@ಔಟ್‌ಲುಕ್ ಡಾಟ್ ಕಾಂ ಎಂಬ ಈ-–ಮೇಲ್ ಐಡಿಯಿಂದ ಬೆಳಿಗ್ಗಿನ ಜಾವ 5 ರ ಸುಮಾರಿಗೆ ದುಷ್ಕರ್ಮಿಯೊಬ್ಬರು ಸಂದೇಶ ರವಾನಿಸಲಾಗಿತ್ತು. ಮೇಲ್ ನೋಡಿದ ಸಮಯದಲ್ಲಿ ತಾಲೂಕು ಕಚೇರಿಯಲ್ಲಿ ಇದ್ದ ಸಿಬ್ಬಂದಿಗಳು ಭಯಭೀತರಾಗಿ ತಹಶೀಲ್ದಾರ್ ಮೋಹನಕುಮಾರಿ ಗಮನಕ್ಕೆ ತಂದ ಕೂಡಲೇ ಪೋಲಿಸ್ ಠಾಣೆಗೆ ಮಾಹಿತಿ ನೀಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕಚೇರಿಯಲ್ಲಿ ಇದ್ದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರನ್ನು ಕಚೇರಿಯಿಂದ ಹೊರ ಕೇಳಿದ್ದಾರೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಮೈಸೂರುದಿಂದ ಆಗಮಿಸಿದ ಬಾಂಬ್ ನಿಷ್ಕ್ರೀಯ ಹಾಗೂ ಶ್ವಾನ ದಳದಿಂದ ಕಚೇರಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಿತು.ಸರಗೂರು ಪೊಲೀಸ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ತಹಶೀಲ್ದಾರ್ ಕಚೇರಿ ಇರುವುದರಿಂದ, ತಹಶೀಲ್ದಾರ್ ಕಚೇರಿಯನ್ನು ಮಾತ್ರವಲ್ಲದೆ ಇಡೀ ಕಟ್ಟಡವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಆದಾಗ್ಯೂ, ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ, ನಂತರ ಇಮೇಲ್ ನಕಲಿ ಎಂದು ಸಾಬೀತಾಯಿತು.
ನಿಷ್ಕ್ರಿಯ ಹಾಗೂ ಶ್ವಾನದಳ ಪರಿಶೀಲನೆ ನಡೆಸಿ ನಂತರ ತಹಶೀಲ್ದಾರ್ ರವರಿಗೆ ಕಚೇರಿಯಲ್ಲಿ ಯಾವುದೇ ತರಹದ ಬಾಂಬ್ ವಸ್ತುಗಳು ಕಾಣಿಸಿಲ್ಲ ಎಂದು ತಿಳಿಸಿದರು.
ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಆತಂಕ:
ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ ಇರುವ ಇಮೇಲ್ ಬಂದ ನಂತರ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ತಹಶೀಲ್ದಾರ್ ಕಚೇರಿಯಲ್ಲಿ ಶೀಘ್ರದಲ್ಲೇ ಭಾರೀ ಬಾಂಬ್ ಸ್ಫೋಟ ಸಂಭವಿಸಲಿದೆ, ಎಲ್ಲಾ ಜನರನ್ನು ತಕ್ಷಣವೇ ಸ್ಥಳಾಂತರಿಸಬೇಕು” ಎಂದು ಇಮೇಲ್ ನ ವಿಷಯ ಕನ್ನಡದಲ್ಲಿ ಬರೆಯಲಾಗಿದ್ದು ತಾಲೂಕಿನ ಜನತೆಯಲ್ಲಿ ಭಯಭೀತಿ ಎದುರಾಗಿತ್ತು.
ನಂತರ ಮಾತನಾಡಿದ ತಹಶೀಲ್ದಾರ್ ಮೋಹನಕುಮಾರಿ, ಕಚೇರಿಯ ಶೀರಲ್ದಾರ್ ಮನೋಹರ್ ಮೇಲ್ ಯನ್ನು ಪ್ರತಿ ದಿನ ನೋಡುತ್ತಾರೆ, ಅದರಿಂದ ಇದ್ದು ನೋಡುವಾಗ ಕಂಡು ಬಂದಿದೆ. ಮೇಲ್ ಯಲ್ಲಿ ಸರಗೂರು ತಾಲೂಕು ಇರುವುದರಿಂದ ನಾವುಗಳು ಗಂಭೀರವಾಗಿ ವಿಷಯವನ್ನು ತೆಗೆದುಕೊಳ್ಳುವ ಬೇಕಾಗಿತ್ತು.ನಮ್ಮ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಕೂಡಲೇ ಶೀಘ್ರದಲ್ಲೇ ಕಚೇರಿಯಲ್ಲಿ ಇದ್ದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರನ್ನು ಹೊರ ಕಳಿಸಿ.ಕೂಡಲೇ ಜಿಲ್ಲಾಧಿಕಾರಿಗಳು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿ ನಿಷ್ಕ್ರಿಯ ಹಾಗೂ ಶ್ವಾನದಳ ಈಶಾ ಒಂದು ಗಂಟೆ ಕಾಲ ಪರಿಶೀಲನೆ ನಡೆಸಿದ್ದಾರೆ. ಕಚೇರಿಯಲ್ಲಿ ಬಾಂಬ್ ವಸ್ತುಗಳು ಕಾಣಿಸಿಲ್ಲ ಎಂದು ವರದಿ ನೀಡಿದ್ದಾರೆ.ಅನುಮಾನಾಸ್ಪದ ರೀತಿಯಲ್ಲಿ ಯಾವುದೇ ಕಂಡು ಬಂದಿಲ್ಲ . ತಾಲೂಕಿನ ತಹಸಿಲ್ದಾರ್ ಕಚೇರಿಯಲ್ಲಿ ಘಟನೆ ನಡೆದಿದ ಹಿನ್ನೆಲೆಯಲ್ಲಿ ಯಾರೂ ಆತಂಕದಲ್ಲಿ ಒಳಗಡದೆ ದಿನನಿತ್ಯ ಸಾರ್ವಜನಿಕರು ಕೆಲಸ ನಿರಂತರವಾಗಿ ಬರಬಹುದು ಎಂದು ಮನವಿ ಮಾಡಿಕೊಂಡರು.
ಬಾಂಬ್ ಇಡಲಾಗಿದೆ ಎನ್ನುವ ಮಾಹಿತಿ ಮೇರೆಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಆತಂಕದಲ್ಲಿ ನೋಡುತ್ತಿರುವ ದೃಶ್ಯ.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮೋಹನಕುಮಾರಿ, ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಪಿಎಸ್ಐ ಆರ್ ಕಿರಣ್, ಕ್ರೈಂ ಬ್ರಾಂಚ್ ಪಿಎಸ್ಐ ಗೋಪಾಲ್,ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್,ಪಪಂ ಅಧ್ಯಕ್ಷೆ ಚೈತ್ರ ಸ್ವಾಮಿ, ಸದಸ್ಯ ಶ್ರೀನಿವಾಸ, ನಿಷ್ಕ್ರಿಯ ಹಾಗೂ ಶ್ವಾನದಳ ಅಧಿಕಾರಿ ರಾಘವೇಂದ್ರ, ಪುಟ್ಟರಾಜು, ರಾಜೇಶ್, ಮಂಜುನಾಥ,ಭೈರಶ್ನಾಯಕ, ಮಂಜು, ಸಿಬ್ಬಂದಿ ವರ್ಗದವರು ಗ್ರೇಟ್ 2 ತಹಸಿಲ್ದಾರ್ ಪರಶಿವಮೂರ್ತಿ, ಉಪತಹಸೀಲ್ದಾರ್ ಸುನೀಲ್, ಆರ್ ಐ ರವಿಚಂದ್ರನ್,ಮುಜಿಂಬ್, ಶ್ರೀನಿವಾಸ, ಇಮ್ರಾನ್, ಸುನೀಲ್, ಕೃಷ್ಣಯ್ಯ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


