ಚಾಕುವಿನಿಂದ ಕತ್ತು ಸೀಳಿ ಭಾವನನ್ನೇ ಬಾಮೈದ ಹತ್ಯೆಗೈದಿರುವಂತಹ ಘಟನೆ ಚಿಕ್ಕೋಡಿಯ ವಿದ್ಯಾನಗರದಲ್ಲಿ ಮನೆಯಲ್ಲಿ ನಡೆದಿದೆ.
ಮೂಲತಃ ಜೈನಾಪುರ ಗ್ರಾಮದವರಾಗಿದ್ದ ಈರಗೌಡ ಟೋಪಗೋಳ, ಸೇನೆಯಿಂದ ನಿವೃತ್ತಿ ಬಳಿಕ ಕ್ರಷರ್ ನಡೆಸುತ್ತಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈರಗೌಡ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಈರಗೌಡ ಶವ ಸ್ಥಳಾಂತರ ಮಾಡಿದ್ದು, ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.