ಕೊರಟಗೆರೆ: ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವ ಹಿನ್ನೆಲೆ ಕೊರಟಗೆರೆ ತಾಲೂಕಿನ ಅಹಿಂದ ಸಂಘಟನೆಗಳ ಒಕ್ಕೂಟ ಮತ್ತು ಕೆ ಎನ್ ಆರ್ ಅಭಿಮಾನಿಗಳ ಬಳಗ ತುಮಕೂರಿನಲ್ಲಿ ನಡೆಯುವ ಪ್ರತಿಭಟನೆಗೆ ಜಿಲ್ಲಾದ್ಯಂತ ಅಭಿಮಾನಿಗಳು ಕಾರ್ಯಕರ್ತರು ಬರುವಂತೆ ಕರೆ ನೀಡಿದೆ.
ಕೊರಟಗೆರೆ ಪಟ್ಟಣ ಪ್ರವಾಸಿ ಮಂದಿರದಲ್ಲಿ ತಾಲೂಕು ಅಹಿಂದ ಸಂಘಟನೆಯು ಏರ್ಪಡಿಸಿದ್ದ ಪ್ರತಿಕಾ ಗೋಷ್ಟಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್ ಮಾತನಾಡಿ ಕಳೆದ 40 ವರ್ಷಗಳಿಂದ ಕೆ.ಎನ್. ರಾಜಣ್ಣ ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಮಾಡಿ ಬಡವರಿಗೆ ಮತ್ತು ರೈತರಿಗೆ ಬಹಳಷ್ಟು ಒಳ್ಳೆಯದನ್ನು ಮಾಡಿದ್ದಾರೆ, ಈಗ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಮಾಡಿರುವ ಅನ್ಯಾಯವನ್ನು ಸರಿಪಡಿಸಿ ಕೂಡಲೆ ಅವರನ್ನು ಮತ್ತೆ ಸಹಕಾರ ಸಚಿವರನ್ನಾಗಿ ಮಾಡಬೇಕು ಈ ಸಂಭಂದ ಇಂದು ಬೆಳಿಗ್ಗೆ 10 ಗಂಟೆಗೆ ತುಮಕೂರಿನ ಟೌನ್ ಹಾಲ್ ವೃತ್ತದಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಅಹಿಂದ ವರ್ಗದವರು, ಕೆ.ಎನ್.ಆರ್. ಅಭಿಮಾನಿಗಳು ಹಾಗೂ ಎಲ್ಲಾ ಸಹಕಾರ ಬಂಧುಗಳು ಪ್ರತಿಭಟನೆಗೆ ಆಗಮಿಸುವಂತೆ ಮನವಿ ಮಾಡಿದರು.
ಬರಕ ವಿಎಸ್‌ಎಸ್‌ಎನ್ ಅಧ್ಯಕ್ಷ ಗಟ್ಲಹಳ್ಳಿ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಅಹಿಂದ ನಾಯಕರಾದ ಕೆ.ಎನ್.ರಾಜಣ್ಣ ನವರು ಈ ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದಲ್ಲು 10 ಸಾವಿರಕ್ಕೂ ಹೆಚ್ಚು ಅಭಿಮಾನಿ ಮತದಾರದನ್ನು ಹೊಂದಿದ್ದಾರೆ, ಇಂತಹ ಧೀಮಂತನಾಯಕನನ್ನು ಸತ್ಯ ಮಾತನಾಡಿದರು ಎನ್ನುವ ವಿಚಾರಕ್ಕೆ ಏಕಾಏಕಿ ಸಚಿವ ಸ್ಥಾನದಿಂದ ತೆಗೆದಿರುವುದು ಅವರ ಅಭಿಮಾನಿಗಳ ಆಕ್ರೂಶಕ್ಕೆ ಗುರಿಯಾಗಿದೆ, ಇದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟಕ್ಕೆ ಅಭಿಮಾನಿಗಳು ಇಳಿಯಬೇಕಾಗುತ್ತದೆ ಎಂದರು.
ತಾಲೂಕು ಅಹಿಂದ ಒಕ್ಕೂಟದ ಅಧ್ಯಕ್ಷ ಅಶ್ವತ್ಥ ನಾರಾಯಣರಾಜು ಮಾತನಾಡಿ, ಜಿಲ್ಲೆಯಲ್ಲಿ ಕೆ.ಎನ್.ರಾಜಣ್ಣ ಜಿಲ್ಲೆಯ ಒಂದು ಶಕ್ತಿಯಾಗಿ ಬೆಳೆದಿದ್ದಾರೆ, ಅವರಿಗೆ ಅಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಎಲ್ಲಾ ಸಂಘಟನೆಗಳು ಹಾಗೂ ಜಿಲ್ಲಾ ಅಹಿಂದ ಒಕ್ಕೂಟ ಪ್ರತಿಭಟನೆ ಮಾಡಲಿದೆ ಎಂದರು.
ಅಹಿಂದ ನಾಯಕ ಪವನ್ ಕುಮಾರ್ ಮಾತನಾಡಿ ಕೆ.ಎನ್.ರಾಜಣ್ಣ ಪಕ್ಷಾತೀತವಾಗಿ ಎಲ್ಲರನ್ನು ಒಟ್ಟಾಗಿ ಗೌರವಿಸಿ ಎಲ್ಲಾ ವರ್ಗದ ಬಡವರಿಗೆ ಸಹಾಯ ಮಾಡುತ್ತಿದ್ದಂತಹ ನಾಯಕರಿಗೆ ಈ ರೀತಿಯ ಅನ್ಯಾಯ ಸರಿಯಿಲ್ಲ ಕೂಡಲೇ ಅ ಪಕ್ಷದ ನಾಯಕರು ಇದನ್ನು ಸರಿಪಡಿಸಬೇಕು ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ವಿ,ಪಿ.ಕಾಂತರಾಜು ಮಾತನಾಡಿ ಕೆ.ಎನ್.ರಾಜಣ್ಣರ ಸೇವೆಯನ್ನು ಹೈಕಮಾಂಡ್ ಅನ್ಯಾಯ ಮಾಡುವಾಗ ಪರಿಗಣಿಸಬೇಕಿತ್ತು, ರಾಜ್ಯದಲ್ಲಿ ಯಾರದೂ ಕುಯಿಕ್ತಿ ರಾಜಕಾರಣ ಯಿಂದ ಈ ಅನ್ಯಾಯವಾಗಿದ್ದು ಮುಂದಿನ ದಿನಗಳಲ್ಲಿ ಅಹಿಂದ ಸಂಘಟನೆ ಅವರಿಗೆ ಪಾಠ ಕಲಿಸಲಿದೆ ಎಂದರು.
ಕಸಬಾ ವಿಎಸ್‌ಎಸ್‌ಎನ್ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ ರಾಜಣ್ಣ ನವರಿಗೆ ಆದ ಅನ್ಯಾಯ ಇಡೀ ರಾಜ್ಯದ ಜನರಿಗೆ ನೋವು ತಂದಿದೆ, ಕೆ.ಎನ್.ರಾಜಣ್ಣ ಶಕ್ತಿ ಅವರ 75ನೇ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಆಚರಿಸಿದ ಲಕ್ಷಾಂತರ ಜನರ ಭಾವನೆ ಹೈಕಮಾಂಡ್ ಅರ್ಥ ಮಾಡಿಕೊಂಡು ಅನ್ಯಾಯವನ್ನು ಸರಿಪಡಿಸಬೇಕು ಎಂದರು.
ಹೊಳವನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ ಕೆ.ಎನ್.ರಾಜಣ್ಣ ನವರು ಮೊದಲಿನಿಂದಲೂ ಸತ್ಯವನ್ನು ನೇರವಾಗಿ ಮಾತನಾಡುತ್ತಾರೆ, ಮೊನ್ನೆಯೂ ಸಹ ಸತ್ಯವನ್ನೇ ಹೇಳಿದ್ದಾರೆ, ಅದನ್ನು ಕಾಂಗ್ರೆಸ್ ಹೈಕಮಾಂಡ್ ತಪ್ಪಾಗಿ ಗ್ರಹಿಸಿ ಈ ರೀತಿ ಅನ್ಯಾಯ ಮಾಡಿದರೆ ಮುಂದೆ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸೂನ್ಯ ಸ್ಥಾನ ಸಂಪಾದಿಸಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದರು.
ಪ್ರತಿಕಾಗೋಷ್ಠಿಯಲ್ಲಿ ಅಭಿಮಾನಿ ಬಳಗದ ವಿಎಸ್ ಎಸ್ ಎನ್ ಅಧ್ಯಕ್ಷ ಮಧು ಕುಮಾರ್, ಜಬಿಉಲ್ಲಾ, ಈಶಪ್ರಸಾದ್, ಎ.ಬಿ.ಸುನಿಲ್, ರಾಜಣ್ಣ, ಜಯರಾಮ್, ವಿಜಯ್ ಕುಮಾರ್, ಆರ್.ರಾಜಶೇಖರಯ್ಯ, ರಮೇಶ್, ಮಂಜುನಾಥ್, ಶಶಿಕುಮಾರ್, ಮಲ್ಲಣ್ಣ,ದಿನಕರ್, ಹನುಮಂತರಾಯಪ್ಪ, ರವಿಕುಮಾರ್, ಕಾಳಿಚರಣ್ ಸುರೇಶ್, ಸಹಕಾರ ಸಂಘಗಳ ಸದಸ್ಯರು ಅಭಿಮಾನಿಗಳು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC