ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2017 ರಿಂದ 2024 ರ ವರೆಗೆ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಇಲಾಖೆಯ ಪರೀಕ್ಷೆ ಬರೆದು ಅಕ್ಷರ ದಾಸೋಹದ ತಾಲ್ಲೂಕು ಸಹಾಯಕ ನಿರ್ದೇಶಕರಾಗಿ ಆಯ್ಕೆಯಾಗಿರುವ ಶಂಕರಪ್ಪ ರವರಿಗೆ ಸೋಮವಾರದಂದು ಶಾಲೆಯ ಸ್ಥಳೀಯ ಮುಖ್ಯ ಶಿಕ್ಷಕರ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಉತ್ತಮ ಹೊಂದಾಣಿಕೆ ಮತ್ತು ಮಾರ್ಗದರ್ಶನ ನೀಡುತ್ತಿದ್ದರು. ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಸರ್ಕಾರಿ ಪ್ರೌಢಶಾಲೆ ಇವರ ಆಡಳಿತಾವಧಿಯಲ್ಲಿ ಉತ್ತಮ ಪ್ರಗತಿ ಕಂಡಿದೆ. ಶಾಲಾ ಕಾಂಪೌಂಡ್, ಕೊಠಡಿಗಳು ನಿರ್ಮಾಣವಾಗಿವೆ. ಗಿಡಮರಗಳು ನೆಟ್ಟು ಹಸಿರುಗೊಳಿಸಲಾಗಿದೆ. ಶೌಚಾಲಯ, ಕ್ರೀಡಾಂಗಣ ಅಭಿವೃದ್ದಿ ಆಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿದೆ. ಇಂತಹ ಶಿಕ್ಷಕರ ಸೇವೆ ಪ್ರತಿ ಶಾಲೆಗೂ ಬೇಕು ಎಂದು ಐ.ಎ.ನಾರಾಯಣಪ್ಪ ತಿಳಿಸಿದರು.
ಸ್ಥಳೀಯ ಶಾಲೆಗಳ ಮುಖ್ಯಶಿಕ್ಷಕರು ಮತ್ತು ಸರ್ಕಾರಿ ಪ್ರೌಢಶಾಲೆಯ ಎಲ್ಲಾ ಶಿಕ್ಷಕರು ಶಂಕರಪ್ಪ ರವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ಇದೇ ಸಂದರ್ಭದಲ್ಲಿ ಪ್ರಭಾರಿ ಮುಖ್ಯಶಿಕ್ಷಕ ಹನುಮಂತರಾಯಪ್ಪ, ಸಿ.ಆರ್.ಪಿ ಬಂಗಾರಲಿಂಗಂ, ರಾಜಬಾಬು, ಚನ್ನಮಲ್ಲಿಕಾರ್ಜುನ, ರಾಮಲಿಂಗಪ್ಪ, ಕಳಾವತಿ, ಅಕ್ಕಲಪ್ಪ, ಬಿ.ತಿಪ್ಪೇಸ್ವಾಮಿ, ಸತ್ಯನಾರಾಯಣ ರೆಡ್ಡಿ, ಕೌಸಲ್ಯದೇವಿ, ಗೌಡ, ನಿವೃತ್ತ ದೈಹಿಕ ಶಿಕ್ಷಕ ಸುಬ್ಬರಾಯಪ್ಪ, ಶಿಕ್ಷಕರಾದ ವಿನುತಲಕ್ಷ್ಮಿ, ಹರೀಶ್, ಮಂಜುನಾಥ, ಯೋಗೀಶ್, ಕಾರ್ತೀಕ್, ರೇಣುಕಾದೇವಿ, ನಾಗಪುಷ್ಪ, ಹಾಗೂ ಸಿಬ್ಬಂದಿ ವರ್ಗ ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296