ಬೀದರ್: ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಿರಿಯ ಮಹಿಳಾ ಸುರಕ್ಷಾ ಅಧಿಕಾರಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವಮ್ಮ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಶಿವಮ್ಮನವರು ಸುಮಾರು 18 ವರ್ಷ ಪ್ರಾಥಮಿಕ ಆರೋಗ್ಯ ಕೇಂದ್ರ ಡೂನಗಾಂವ ಎಂ. ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ವಡಗಾಂವನಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.
ಸಂತಪೂರ ಆಸ್ಪತ್ರೆಯಲ್ಲಿ ಡಾ.ಪ್ರವೀಣ್ ಕುಮಾರ್ ಹೂಗಾರ್ ಅವರ ನೇತೃತ್ವದಲ್ಲಿ ಅವರ ಕುಟುಂಬ ವರ್ಗದವರಿಗೆ ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಆರೋಗ್ಯ ಇಲಾಖೆಯಲ್ಲಿ ಯಾರೇ ನಿವೃತ್ತಿ ಹೊಂದಿದರೂ, ಹಿರಿಯ ಅಧಿಕಾರಿಯಿಂದ ಡಿ ಗ್ರೂಪ್ ವರೆಗೂ ನಿವೃತ್ತಿ ಹೊಂದಿದವರಿಗೆ ಬೀಳ್ಕೊಡುಗೆ ಸಮಾರಂಭ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಅವರ ಕುಟುಂಬ ವರ್ಗಕ್ಕೆ ಮುಂದಿನ ಜೀವನ ಸುಖಕರವಾಗಲಿ ಎಂದು ಶುಭ ಹಾರೈಸಿದರು.
ಶಿವಮ್ಮ ಮಾತನಾಡಿ, ಸಂತಪುರ ಆಸ್ಪತ್ರೆ ಎಲ್ಲ ವೈದ್ಯಾಧಿಕಾರಿಗಳಿಗೂ, ಎಲ್ಲ ಸಿಬ್ಬಂದಿ ವರ್ಗದವರು ನನ್ನನ್ನು ಕರೆದು ಪ್ರೀತಿ ವಾತ್ಸಲ್ಯದಿಂದ ಸನ್ಮಾನ ಮಾಡಿದ್ದು ತುಂಬಾ ಸಂತೋಷವಾಗಿದೆ. ಸಂಸ್ಥೆಯ ವೈದ್ಯಾಧಿಕಾರಿಗಳಿಗೂ ಎಲ್ಲಾ ಸಿಬ್ಬಂದಿ ವರ್ಗದವರು ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.
ಸಮಾರಂಭದಲ್ಲಿ ಡಾ. ರೇಣುಕಾ, ವೈಜಿನಾಥ ಚನ್ನಶೆಟ್ಟಿ, ಗುರು ಅಂಕಲಗಿ, ವಿಜಯ್ ಕುಮಾರ್, ಸುನಿತಾ, ಅಂಬಿಕಾ, ಆಶಾಲತಾ, ಶೃತಿ. ದೀಪಕ್, ಶ್ರೀಕಾಂತ್, ಉಮಕಾಂತ್, ಶಿವ, ಅರುಣ್ ಕುಮಾರ್ ಇತರರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx