ವರದಿ: ಹಾದನೂರು ಚಂದ್ರ
ಸರಗೂರು: ತಾಲೂಕಿನ ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್ ಎಂಬುವರ ಮೇಲೆ ಹುಲಿ ದಾಳಿ ನಡೆಸಿ, ಪ್ರಾಣ ಬಲಿ ಪಡೆದಿದೆ. ಬಡಗಲಪುರ ಗ್ರಾಮದಲ್ಲಿ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ರೈತನ ಮೇಲೆ ನರಭಕ್ಷಕ ಹುಲಿ ದಾಳಿ ನಡೆಸಿರುವ ಘಟನೆ ಮುಳ್ಳೂರು(ಬೆಣ್ಣೇಗೆರೆ) ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ನುಗು ವನ್ಯಜೀವಿ ವಲಯ ಅರಣ್ಯದಂಚಿನ ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಣ್ಣೇಗೆರೆ ಗ್ರಾಮದ ರಾಜಶೇಖರ್(65) ಹುಲಿ ದಾಳಿಯಿಂದ ಮೃತಪಟ್ಟವರು.
ಮೃತರಿಗೆ ಒಬ್ಬರು ಪುತ್ರರು, ಪತ್ನಿ ಇದ್ದಾರೆ. ಇವರು ಜಮೀನಿನಲ್ಲಿ ದನ ಮೇಯಿಸುವಾಗ ಹುಲಿ ಏಕಾಏಕಿ ದಾಳಿ ನಡೆಸಿ, ಕುತ್ತಿಗೆಗೆ ಬಲವಾಗಿ ಕಚ್ಚಿದೆ. ತಿನ್ನಲು ಯತ್ನಿಸಿ 100 ಮೀ. ದೂರದವರೆಗೂ ಎಳೆದುಕೊಂಡು ಹೋಗಿದೆ. ಆದರೆ, ತಿಂದಿಲ್ಲ. ಇದರಿಂದ ತೀವ್ರ ರಕ್ತಸ್ರಾವವಾಗಿದ್ದು, ರಾಜಶೇಖರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರೈತರ ಆಕ್ರೋಶ: ಹುಲಿ ದಾಳಿಯಿಂದ ರೈತ ಸಾವಿಗೀಡಾದ ಸಂಗತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಮೃತಕುಟುಂಬಕ್ಕೆ 30 ಲಕ್ಷ ರೂ.ಸಹಾಯಧನ ನೀಡಬೇಕೆಂದು ಒತ್ತಾಯಿಸಿದರು.
ಹುಲಿ ದಾಳಿಯಿಂದ ರೈತ ಸಾವಿಗೀಡಾದ ಸಂಗತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ಇದ್ದುದರಿಂದ ಆಕ್ರೋಶಗೊಂಡ ರೈತರು ಅರಣ್ಯ ಇಲಾಖೆ ಕಚೇರಿ ಬಳಿ ಮೃತದೇಹ ತಂದು ಪ್ರತಿಭಟನೆ ಮಾಡಲು ಮುಂದಾಗುತ್ತೆವೆ ಎಂದು ಎಚ್ಚರಿಸಿದರು.
ಆಗ ಸ್ಥಳಕ್ಕೆ ಸರಗೂರು ಪೋಲಿಸ್ ಠಾಣೆ ಅದು ಅಧಿಕಾರಿಗಳು ತೆರಳಿ ಹುಲಿ ದಾಳಿ ಮಾಡಿದ ಸ್ಥಳವನ್ನು ಪರಿಶೀಲನೆ ನಡೆಸಿದರು.ನಂತರ ರೈತರು ಹಾಗೂ ಗ್ರಾಮಸ್ಥರನ್ನು ಮನವೊಲಿಸಲು ಅಧಿಕಾರಿಗಳು ಮುಂದಾಗಿದೆ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು.
ನಂತರ ತಾಲ್ಲೂಕಿನ ಶಾಸಕರಾದ ಅನೀಲ್ ಚಿಕ್ಕಮಾದುರವರು ಹುಲಿ ದಾಳಿಗೆ ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ಮಾಡಲು ಮುಂದಾದ ವೇಳೆ ಅರಣ್ಯಾಧಿಕಾರಿಗಳು ಬರುವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದರು.
ಹೆಡಿಯಾಲ ಉಪ ವಲಯದ ಕಾಡಂಚಿನ ಭಾಗದಲ್ಲಿ ಹುಲಿ ಚಿರತೆ ಕಾಡು ಪ್ರಾಣಿಗಳಿಂದ ರಕ್ಷಣೆ ಇಲ್ಲದೆ ಪರದಾಡುತ್ತಿದ್ದಾರೆ. ಅದರೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಶಾಸಕರಿಗೆ ದೂರು ನೀಡಿದರು.
ಸ್ಥಳದಲ್ಲೇ ಅಡಗಿದ್ದ ಹುಲಿ:
ವಿಷಯ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಸ್ಥಳದಲ್ಲೇ ಅಡಗಿದ್ದ ಹುಲಿ, ಜನರ ಗದ್ದಲ ಹೆಚ್ಚಾಗುತ್ತಿದ್ದಾಂತೆ ಜನರ ಮಧ್ಯೆ ಘರ್ಜಿಸುತ್ತ ಓಡಿತು. ಹುಲಿ ಕಾಣಿಸಿಕೊಂಡದ್ದರಿಂದ ಜನರು ಭಯಭೀತರಾಗಿ ಓಡಿದರು.
ಸ್ಥಳಕ್ಕೆ ಬಾರದ ಸಚಿವರು:
ಹುಲಿ ದಾಳಿಗೆ ರೈತ ಬಲಿಯಾಗಿರುವ ವಿಚಾರ ಸಚಿವ ಈಶ್ವರ್ ಬಿ ಖಂಡ್ರೆ ಅವರಿಗೆ ಗಮನಕ್ಕೆ ತಂದಿದ್ದರೂ ಅವರು ಸ್ಥಳಕ್ಕೆ ಆಗಮಿಸದೆ, ನಿರ್ಲಕ್ಷ್ಯ ವಹಿಸಿದ್ದರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಸಚಿವರಿಗೆ ರೈತರ ಜೀವಕ್ಕಿಂತ ಇವರ ಅಧಿಕಾರವೇ ಹೆಚ್ಚಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



