ಹಾಸನ: ಜಮೀನು ಬಳಿ ಫಸಲಿಗೆ ನೀರು ಹಾಯಿಸುತ್ತಿದ್ದ ಹೊಳೆನರಸೀಪುರ ತಾಲ್ಲೋಕಿನ ಹಾರಗೌಡನಹಳ್ಳಿ ಗ್ರಾಮದ ರೈತರಾದ ರಾಜೇಗೌಡ (63) ಎಂಬುವವರ ಮೇಲೆ ಏಕಾಏಕಿ ಕಾಡುಹಂದಿ ದಾಳಿ ಮಾಡಿದೆ. ದಾಳಿ ಮಾಡಿದೆ ಪರಿಣಾಮ ರೈತ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ರೈತ ರಾಜೇಗೌಡರಿಗೆ ಸಹಾಯ ಮಾಡಲು ಹೋದ ಇಬ್ಬರು ಮಹಿಳೆಯರಿಗೂ ಕಾಡು ಹಂದಿ ಗಾಯ ಮಾಡಿದೆ. ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ರೈತನ ಹತ್ಯೆ ಮಾಡಿದ ಕಾಡು ಹಂದಿ ವಿರುದ್ಧ ಸಿಟ್ಟಿಗೆದ್ದು ಸ್ಥಳೀಯ ರೈತರು ಕಾಡುಹಂದಿಯನ್ನು ಅಟ್ಟಾಡಿಸಿ ಹೊಡೆದು ಸಾಯಿಸಿದ್ದಾರೆ.. ಸುದ್ದಿ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಮಂಜು ಶ್ರವಣೂರು


