ಪಾವಗಡ: ಪಾವಗಡದಿಂದ ಮಧುಗಿರಿ ಕಡೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವ ವೇಳೆ ಎದುರಿಗೆ ಬಂದ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಪಾವಗಡ ತಾಲೂಕಿನ ರಾಜವಂತಿ ಸಮೀಪದ ರಿಲ್ಯಾಕ್ಸ್ ಬಾರ್ ಸಮೀಪ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಪಾವಗಡ ಪಟ್ಟಣದ ಕನುಮನಕೆರೆಯ ನಾಗಮ್ಮ ಈರದಾಸಪ್ಪ ಎಂಬವರ ಪುತ್ರ 25 ವರ್ಷದ ಅಂಬರೀಶ್ ಎಂದು ಗುರುತಿಸಲಾಗಿದ್ದು , ಗಂಭೀರವಾಗಿ ಗಾಯಗೊಂಡಿರುವ ಭಾಸ್ಕರ್ ನನ್ನ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ರವಾನಿಸಲಾಗಿದೆ.
ಇನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಯ ಬಳಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


