ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್ ನಂಬರ್ 42 ಭಾಗ್ಯನಗರ್ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ವಿಷಯದ ಕುರಿತು ಹಲ್ಲೆಗೆ ಒಳಗಾದ ಸದಸ್ಯ ಅಜಿತ್ ತೆವಳೇಕರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂದರ್ಭ ದಲ್ಲಿ ಘಟನೆಯ ಮಾಹಿತಿ ಕುರಿತು ಮಾಹಿತಿ ನೀಡಿದ್ದಾರೆ.
ವಾರ್ಡ್ ನಂಬರ್ 42 ಭಾಗ್ಯನಗರದಲ್ಲಿ ರಮೇಶ್ ಪಾಟೀಲ್ ಎಂಬುವರ ಮನೆಯ ಮೇಲೆ ಮೊಬೈಲ್ ಟವರ್ ಅಳವಡಿಸಲು ವಿವಾದ ನಡೆದಿತ್ತು. ವಾರ್ಡ್ ನಂಬರ್ 42 ಜನರು ಈ ಮೊಬೈಲ್ ಟವರ್ ಅನ್ನು ಅಳವಡಿಸುವ ಕುರಿತು ವಿರೋಧ ವ್ಯಕ್ತಪಡಿಸಿ ನನಗೆ ದೂರು ನೀಡಿದ್ದರು. ಈ ವಿಷಯವಾಗಿ ರಮೇಶ್ ಪಾಟೀಲ್ ಎಂಬುವವರ ಮನೆಯ ಮೇಲೆ ಅಳವಡಿಸಲಾಗುತ್ತಿರುವ ಮೊಬೈಲ್ ಟವರನ್ನು ಅಳವಡಿಸಬಾರದೆಂದು ಅವರಿಗೆ ತಿಳಿಸಲಾಗಿತ್ತು. ಹಾಗೂ ಸಂಬಂಧಪಟ್ಟ ಕಚೇರಿಗಳಿಂದ ಯಾವುದೇ ದಾಖಲಾತಿಗಳು ಅಥವಾ ಪರವಾನಿಗೆ ಇರದೇ ಇರುವುದು ಕೂಡ ಈ ವಿಷಯದ ಮುಖ್ಯ ವಿಷಯವಾಗಿತ್ತು.
ಆದ್ದರಿಂದ ಸಾರ್ವಜನಿಕರ ಮೊಬೈಲ್ ಟವರ್ ಅಳವಡಿಸುವುದು ಕುರಿತು ವಿರೋಧಿಸುತ್ತಾ ಇದ್ದರು ಈ ವಿಷಯದವಾಗಿ ರಮೇಶ್ ಪಾಟೀಲ್ ಎಂಬುವರಿಗೆ ಹಲವಾರು ಬಾರಿ ತಿಳಿಸಿದರೂ ಕೂಡ ಅವರು ಉಡಾಫೆ ಉತ್ತರಗಳನ್ನು ನೀಡುತ್ತಾ ಮತ್ತು ಅಸಭ್ಯವಾಗಿ ವರ್ತಿಸುತ್ತಾ ಇದ್ದರು. ಕಳೆದ ರಾತ್ರಿ ಮೊಬೈಲ್ ಟವರ್ ಅನ್ನು ಅಳವಡಿಸಲು ಪ್ರಾರಂಭಿಸಿದರು. ರಾತ್ರಿ 1:30ರ ಸುಮಾರಿಗೆ ಹೋಗಿ ಮೊಬೈಲ್ ಟವರ್ ಕೂಡಿಸಬಾರದೆಂದು ಎಚ್ಚರಿಕೆ ನೀಡಿ ತಳಕವಾಡಿ ಪೊಲೀಸ್ ಠಾಣೆಗೆ ತಿಳಿಸಲಾಯಿತು.
ನಂತರ ಬೆಳಗ್ಗೆ 11 ಘಂಟೆಯ ಸಮಯದ ಆಸುಪಾಸು ರಮೇಶ್ ಪಾಟೀಲ್ ಮತ್ತು ಅವರ ಸಂಗಡಿಗರು ಬಂದು ನನ್ನ ಮೇಲೆ ಹಲ್ಲೆ ಮಾಡಿ ಕಬ್ಬಿನ ಸಲಾಕೆಯಿಂದ ಹೊಡ್ದಿದ್ದಾರೆ. ಈ ಘಟನೆಯಿಂದ ನಾನು ಅಘಾತಗೊಂಡಿದ್ದೇನೆ. ತೆಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಮಾಹಿತಿ ನೀಡಿದರು.


