ತಿಪಟೂರು: ನಗರದ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಫೆಬ್ರವರಿ 24ರ ಬೆಳಿಗ್ಗೆ 11 ಗಂಟೆಗೆ ವೀರಶೈವ ಲಿಂಗಾಯಿತರ ಸಂಘಟನೆಯ ಪ್ರಾರಂಭೋತ್ಸವ ಮತ್ತು ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ರೇಣುಕಾ ರಾಧೃ ತಿಳಿಸಿದರು
ತಿಪಟೂರು ತಾಲೂಕಿನಲ್ಲಿ ವೀರಶೈವರು ಬಹು ಸಂಖ್ಯಾತರಿದ್ದು ಆರ್ಥಿಕವಾಗಿ ಹಿಂದುಳಿದಿದ್ದಾರೆ. ವೀರಶೈವಸಮುದಾಯದಲ್ಲಿ ಜಾಗೃತಿ ಮೂಡಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶಾಸಕ ಕೆ. ಷಡಕ್ಷರಿ ಸಮಾವೇಶ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ವೀರಶೈವ ಮಹಿಳಾಘಟಕದ ರಾಜ್ಯಾಧ್ಯಕ್ಷೆ ಎಸ್.ವೈ.ಅರುಣದೇವಿ, ನಟರಾದ ದೊಡ್ಡಣ್ಣ, ಕಾಂಗ್ರೆಸ್ ಮುಖಂಡ ಲೋಕೇಶ್ವರ್, ನಿವೃತ್ತ ಜಿಲ್ಲಾಧಿಕಾರಿ ಸೋಮಶೇಖರ್, ಚಟ್ಟನಳ್ಳಿ ಮಹೇಶ್ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಗೋಷ್ಠಿಯಲ್ಲಿ ನಾಕ್ಕೇನಹಳ್ಳಿ ಸುರೇಶ್, ನವಿಲೆಪರಮೇಶ್ ಮುಂತಾದವರು ಭಾಗವಹಿಸಿದ್ದರು
ವರದಿ: ಆನಂದ್ ತಿಪಟೂರು