ಮನುಷ್ಯರ ಬಗ್ಗೆ ಬೇಧ ಭಾವ ಇರುತ್ತೆ ಅದು ಧರ್ಮ ಅಲ್ಲ ಎಂದು ಕಂದಾಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಮ್ ಪುರದಲ್ಲಿ ಎಫ್ ಐಆರ್ ದಾಖಲಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಸಂವಿಧಾನ ನನ್ನ ಧರ್ಮ ಅಂದಿದ್ದಕ್ಕೆ ಎಫ್ಐಆರ್ ಆಗಿದೆ.
ಸಂವಿಧಾನದಲ್ಲಿ ಸಮಾನತೆ ಇದೆ, ಸಮಾನವಾದ ಅವಕಾಶವಿದೆ. ಸಮಾನವಾದ ಬದಕು ಕೋಡುವ ನಿಯಮ ಇದೆ, ಕಾನೂನು ಇದೆ. ಇದು ನನ್ನ ಧರ್ಮ ಅಂದಿದ್ದಕ್ಕೆ ಕೇಸ್ ಮಾಡಿದ್ರೆ ಮಾಡಿಕೊಳ್ಳಲಿ, ನನಗೇನು ಎಂದು ಹೇಳಿದರು.
ಉದಯನಿಧಿ ಸ್ಟಾಲಿನ್ ಹೇಳಿದ್ದು, ನಾನು ಹೇಳಿದ್ದು ಅಜಗಜಾಂತರ ವ್ಯತ್ಯಾಸ ಇದೆ ಎಂದು ಕಂದಾಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವುದಾದರೂ ಒಂದು ಧರ್ಮದ ಬಗ್ಗೆ ಮಾತನಾಡಿದ್ದೀನಾ ಎಂದರು. ಮನುಷ್ಯರ ಬಗ್ಗೆ ಬೇಧ ಭಾವ ಇರುತ್ತೆ ಅದು ಧರ್ಮ ಅಲ್ಲ. ಇದರಲ್ಲಿ ಏನು ತಪ್ಪಿದೆ. ಇದನ್ನು ಮೊದಲು ಅವರು ತಿಳಿದುಕೊಳ್ಳಲಿ. ಬಸವಣ್ಣ, ಅಂಬೇಡ್ಕರ್ ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಹೇಳಿದ್ದರು. ಪ್ರಬುದ್ಧತೆ ಇವರು ಕಳೆದುಕೊಂಡಿದ್ದಾರೆ ಎಂದು ಕಿಡಿ ಕಾರಿದರು.


