- ರಾತ್ರಿ ವೇಳೆಯಲ್ಲಿ ರಾಜ್ಯ ಹೆದ್ದಾರಿಗೆ ಸುರಿದ ಮಣ್ಣು
- ರಸ್ತೆಗೆ ಮಣ್ಣು ಸುರಿದ್ದಿದ್ದರಿಂದ ಅಪಘಾತ ಸಂಭವಿಸಿ 3 ಜನರಿಗೆ ಗಾಯ
ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಅಕ್ರಮವಾಗಿ ರಾತ್ರಿ ವೇಳೆಯಲ್ಲಿ ರಾಜ್ಯ ಹೆದ್ದಾರಿಗೆ ಸುರಿದ ಮಣ್ಣಿನಿಂದ ಅಪಘಾತ ಸಂಭವಿಸಿ 3 ಜನ ಗಾಯಾಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಜಿ.ನಾಗೇನಹಳ್ಳಿ ಸಮೀಪ ಇರುವ ವಿಶಾಲ್ ನ್ಯಾಚರಲ್ ಫುಡ್ ಪ್ರಾಡೆಕ್ಟ್ ಇಂಡಿಯಾ ಪ್ರವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ಕ್ರಮವಾಗಿ ರಾತ್ರೋರಾತ್ರಿ ಮಣ್ಣು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಟಿಪ್ಪರ್ ಲಾರಿ ಒಳಗೆ ಹೋಗದೇ ಕೊರಟಗೆರೆ ಬೆಂಗಳೂರು ರಸ್ತೆಯ ರಾಜ್ಯ ಹೆದ್ದಾರಿಯ ಮಧ್ಯ ಭಾಗದಲ್ಲಿ ಸುರಿದು ಹೋಗಿದ್ದಾರೆ.
ಮಧುಗಿರಿ ತಾಲೂಕಿನ ಕತ್ತಿರಾಜನಹಳ್ಳಿ ಗ್ರಾಮದ ಸಿದ್ದೇಶ್, ಕಮಲ, ಹೇಮಂತ್ ಎನ್ನವವರ ಸ್ಕೂಟಿ ವಾಹನದಲ್ಲಿ ಬೆಂಗಳೂರು ಮಾರ್ಗವಾಗಿ ಆಗಮಿಸುತ್ತಿದ್ದರು, ರಸ್ತೆ ಮಧ್ಯೆ ಸುರಿದ ಮಣ್ಣು ಕಣ್ಣಿಗೆ ಕಾಣದೆ ಮಣ್ಣಿನ ಮೇಲೆ ಹಾರಿ ಎದುರಿಗೆ ಬರುತ್ತಿದ್ದ ಓಮಿನಿ ವಾಹನಕ್ಕೆ ಗುದ್ದಿದ್ದಾರೆ. ಗುದ್ದಿದ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣ ಜಖಂಯಾಗಿದ್ದು, ಗಾಯಾಳುಗಳಿಗೆ ಕಾಲು ಕೈಗೆ ಬಲವಾಗಿ ಹೊಡೆತ ಬಿದ್ದ ಕಾರಣ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾತ್ರೋರಾತ್ರಿ ಮಣ್ಣು ಸುರಿದು ಈ ಅವಗಡಕ್ಕೆ ಸಂಭಂದಿಸಿದ ವ್ಯವಸ್ಥಾಪಕರ ಪ್ರಶ್ನೆ ಮಾಡಲು ಹೋದ ಸಾರ್ವಜನಿಕರಿಗೆ ಅಲ್ಲಿನ ಸೆಕ್ಯೂರಿಟಿಗಳು ದಮಕಿ ಹಾಕಿದ್ದಾರೆ ಎಂದು ಸಾರ್ವಜನಿಕ ತಿಳಿಸಿದರು.
ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಣ್ಣು ಮಾಫಿಯಾ ಹೆಗ್ಗಿಲ್ಲದೇ ಸಾಗುತ್ತಿದ್ದು, ಕೆರೆಯ ಮಣ್ಣು ರಾತ್ರಿ ವೇಳೆ ಬಗೆದು ಫ್ಯಾಕ್ಟರಿ ಒಳಗೆ ಸಾಗಿಸುತ್ತಿದ್ದರೂ ಯಾವುದೆ ಅಧಿಕಾರಿಗಳು ಇವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಮಣ್ಣು ಮಟ್ಟ ಮಾಡುತ್ತಿದ್ದ ಜೆಸಿಬಿ ಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಏಕಾಏಕಿ ಸುಮಾರು 5–10 ಲೋಡ್ ಗಳಷ್ಟು ಮಣ್ಣು ಹೆದ್ದಾರಿಗೆ ಸುರಿದು ಬೇಜಾವಾಬ್ದಾರಿ ವರ್ತನೆ ತೋರಿದ ಮಾಲೀಕ ಹಾಗೂ ವ್ಯವಸ್ಥಾಪಕರ ಈ ನಡೆಗೆ ಅಪಘಾತ ನಡೆದಿದ್ದು ಫ್ಯಾಕ್ಟರಿ ಮಾಲೀಕನ ವಿರುದ್ದ ಕ್ರಮ ಜರಿಗಿಸುವಂತೆ ಸಾರ್ವಜನಿಕರ ಒತ್ತಾಯವಾಗಿದೆ.
ಕೊರಟಗೆರೆ–ದಾಬಸ್‌ಪೇಟೆ ರಾಜ್ಯ ಹೆದ್ದಾರಿಯಲ್ಲಿ ಇರುವ ಈ ಫ್ಯಾಕ್ಟರಿ ಮುಂದೆ ಯಾವುದೆ ಸೂಚನ ಫಲಕವಾಗಲಿ ಅಥವಾ ಅಪಘಾತ ವಲಯ ಎಂದಾಗಲಿ ಅಳವಡಿಸಿಲ್ಲ. ಪದೇ ಪದೇ ಇಲ್ಲಿ ಅಪಘಾತ ಸಂಭಿಸುತ್ತಿವೆ. ತಿಂಗಳಿಗೆ 10ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ ಆಸ್ಪತ್ರೆ ದಾಖಲಾಗುತ್ತಿದ್ದು, ರಾತ್ರಿ ಈ ಸುರಿದ ಮಣ್ಣಿನಿಂದ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿ ಸವಾರರು ಪಾರದಾಡುವಂತಾಗಿತ್ತು.
ಪೊಲೀಸರ ಮೇಲೆಯೇ ದರ್ಪ:
ಪ್ಯಾಕ್ಟರಿಯ ವ್ಯವಸ್ಥಾಪಕರನ್ನ ಪ್ರಶ್ನೆ ಮಾಡಲು ಹೋದ ಸಾರ್ವಜನಿಕರನ್ನ ನಿಯಂತ್ರಣ ಮಾಡಲು ಬಂದ ಪೂಲೀಸ್ ಅಧಿಕಾರಿಗಳ ಮೇಲೆ ಐವರು ಸೆಕ್ಯೂರಿಟಿಗಳು ದರ್ಪ ಮೆರೆದಿದ್ದಾರೆ. ನಂತರ ಪೂಲೀಸ್ ಅಧಿಕಾರಿಗಳು ಸೆಕ್ಯೂರಿಟಿಗಳಿಗೆ ತರಾಟೆ ತೆಗೆದುಕೊಂಡರು. ನಂತರ ಸಾರ್ವಜನಿಕರನ್ನ ಮನವಲಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದರು.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಹೆದ್ದಾರಿಗೆ ಸುರಿದಿದ್ದ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟರು. ಇದೇ ವೇಳೆ ಸ್ಥಳಕ್ಕೆ ಕೋಳಾಲ ಪಿಎಸ್ ಐ ಅಭಿಷೇಕ್ ಭೇಟಿ ನೀಡಿ ಪರಿಶೀಲನೆ ನಡೆದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC