ಬೆಂಗಳೂರು: ಬಿಗ್ ಬಾಸ್ ಹಾಲಿ ಸ್ಪರ್ಧಿ ತನಿಷಾ ವಿರುದ್ಧ ದೂರು ದಾಖಲಾಗಿದೆ. ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಬೋವಿ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪದಡಿ ನಟಿ ತನಿಷಾ ವಿರುದ್ಧ ಕುಪ್ಪಂಡ ವಿರುದ್ಧ ದೂರು ದಾಖಲಾಗಿದೆ.
8/11/2023ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಡೆ ಪ್ರತಾಪ್ ವಿರುದ್ಧ ನಡೆಸಿದ ಸಂಭಾಷಣೆಯಲ್ಲಿ’ ನೀನು ವಡ್ಡನ ತರ ಆಡುತ್ತಿದ್ದೀಯಾ’ ಎಂಬ ಪದ ಬಳಕೆ ಮಾಡಲಾಗಿದೆ ಎಂದು ವಿರೋಧಿಸಿ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ. ಪದ್ಮಾ ಇವರು, ತನಿಷಾ ವಿರುದ್ಧ ಕುಂಬಳ ಗೋಡು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.


