ಕೊರಟಗೆರೆ : ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2023–24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೊರಟಗೆರೆ ತಾಲ್ಲೂಕಿನಿಂದ 7,632 ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಬೆಳೆ ಸಮೀಕ್ಷೆಯೊಂದಿಗೆ ತಾಳೆಯಾಗದೆ ಅಂತಿಮವಾಗಿ ವಿಮಾ ಕಂಪನಿಯಿಂದ 59 ಪ್ರಸ್ತಾವನೆಗಳು ತಿರಸ್ಕೃತಗೊಂಡಿದ್ದು, ತಿರಸ್ಕೃತಗೊಂಡಿರುವ ರೈತರ 4 ಪಟ್ಟಿಯನ್ನು ತಾಲ್ಲೂಕಿನ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳು ಮತ್ತು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಸೂಚನ ಫಲಕಗಳಲ್ಲಿ ಪ್ರದರ್ಶಿಸಿದ್ದು, ರೈತರು ಆಕ್ಷೇಪಣೆಗಳೇನಾದರು ಇದ್ದಲ್ಲಿ, ಸೂಕ್ತ ದಾಖಲಾತಿಗಳೊಂದಿಗೆ, ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಕೊರಟಗೆರೆ ರವರಿಗೆ 15 ದಿನಗೊಳಗಾಗಿ ಅರ್ಜಿ ಸಲ್ಲಿಸಲು ಸಹಾಯಕ ಕೃಷಿ ನಿರ್ದೇಶಕರಾದ ಎಂ.ಆರ್. ರುದ್ರಪ್ಪ ರವರು ತಿಳಿಸಿದ್ದಾರೆ.
ರೈತರು ಆಕ್ಷೇಪಣೆ ಸಲ್ಲಿಸಲು ಬೆಳೆ ವಿಮೆಗೆ ನೋಂದಣಿ ಮಾಡಿರುವ ಬೆಳೆಯನ್ನು ಬೆಳೆದಿರುವ ಕುರಿತು ಈ ಕೆಳಕಂಡಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ತಿಳಿಸಿದೆ.
- 2023-24 ರ ಪಹಣಿ ಪತ್ರಿಕೆಯಲ್ಲಿ (RTC) ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರಬೇಕು.
- ಬೆಂಬಲ ಬೆಲೆ ಪ್ರಯೋಜನ ಪಡೆದಿದಲ್ಲಿ, ರಶೀದಿ ಸಲ್ಲಿಸುವುದು.
- ವಿಮೆಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು APMC ಮಾರುಕಟ್ಟೆಗೆ ಮಾರಾಟ ಮಾಡಿದಲ್ಲಿ ಸದರಿ ದಾಖಲೆ ನೀಡುವುದು.
- ವಿಮೆಗೆ ನೋಂದಾಯಿತ ಬೆಳೆಯ ಬಿತ್ತನೆ ಬೀಜ ಖರೀದಿಸಿರುವ ಬಗ್ಗೆ ರಶೀದಿ ಇದ್ದಲ್ಲಿ ಸಲ್ಲಿಸುವುದು.
ರೈತರಿಂದ ಬಂದಂತಹ ಮನವಿಗಳನ್ನು ತಾಲ್ಲೂಕು ಮಟ್ಟದ ಸಮಿತಿಯಲ್ಲಿ ಮಂಡಿಸಿ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ರೈತರಿಂದ ಯಾವುದೇ ಆಕ್ಷೇಪಣೆಗಳು 15 ದಿನದೊಳಗಾಗಿ ಬರದಿದ್ದಲ್ಲಿ ಅಂತಹ ಪ್ರಸ್ತಾವನೆಗಳನ್ನು ಅಂತಿಮವಾಗಿ ತಿರಸ್ಕರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿಸಹಾಯಕ ಕೃಷಿ ನಿರ್ದೇಶಕರಾದ ಎಂ.ಆರ್.ರುದ್ರಪ್ಪ ರವರು ತಿಳಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4