ಆಂಧ್ರಪ್ರದೇಶ: ವಿಶಾಖಪಟ್ಟಣಂನ ಇಂಡಸ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ.
ವಿಶಾಖಪಟ್ಟಣಂನ ಇಂಡಸ್ ಆಸ್ಪತ್ರೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿ ಸುಮಾರು 50-70 ರೋಗಿಗಳಿದ್ದರು. ಅವರೆಲ್ಲರನ್ನೂ ಸ್ಥಳಾಂತರಿಸಿದ್ದೇವೆ. ಅಲ್ಲಿ ಯಾರೂ ಇಲ್ಲ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಬೆಂಕಿಗೆ ಕಾರಣ ಆಪರೇಷನ್ ಥಿಯೇಟರ್ ನಿಂದ ಬಂದಂತೆ ತೋರುತ್ತಿದೆ. ನಾವು ತನಿಖೆ ನಡೆಸಿ ಸತ್ಯವನ್ನು ಕಂಡುಕೊಳ್ಳುತ್ತೇವೆ” ಎಂದು ಪೊಲೀಸ್ ಕಮಿಷನರ್ ರವಿ ಶಂಕರ್ ಅಯ್ಯನಾರ್ ಹೇಳಿದ್ದಾರೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಈ ದುರ್ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.


