ಸರಗೂರು: ತಾಲೂಕಿನ ಕೊತ್ತೇಗಾಲ ಗ್ರಾಪಂ ವ್ಯಾಪ್ತಿಯ ಜಯನಗರ ಗ್ರಾಮದ ಜಯರಾಜು ರವರಿಗೆ ಸೇರಿದ ತಂಬಾಕು ಬ್ಯಾರನ್ ಗೆ ಗುರುವಾರದಂದು ಸಂಜೆ ಬೆಂಕಿ ತಗಲಿ ಲಕ್ಷಾಂತರ ರೂ. ಹಾನಿಯಾಗಿದೆ.
ಸ್ಥಳಕ್ಕೆ ಧಾವಿಸಿದ ಹೆಚ್.ಡಿ.ಕೋಟೆ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ಬ್ಯಾರನ್ ಗೆ ಮತ್ತು ಅಕ್ಕ ಪಕ್ಕದ ಮನೆಗಳಿಗೆ ಆಗುವ ಅನಾಹುತವನ್ನು ತಡೆದಿದ್ದಾರೆ. ಜಯರಾಜು ರವರಿಗೆ ಸೇರಿದ ತಂಬಾಕು ಬ್ಯಾರನ್ ನಲ್ಲಿ ತಂಬಾಕು ಸೊಪ್ಪು, ರಿಪರ್ ಗಳು ಕೋಲು, ಓಲೆ ಸರ ನೆತ್ತಿಸರ, ಮತ್ತು ಪೈಪ್ ಸೆಟ್ ಹಂಚುಗಳು, ಹಾಗೂ ಕಿಟಕಿ ಬಾಗಿಲುಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿಸಿದರು.
ಸರಿಯಾದ ಸಮಯಕ್ಕೆ ಬಂದ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಜಯರಾಜುರವರ ಕುಟುಂಬದವರು ಹಾಗೂ ಗ್ರಾಮಸ್ಥರು ಶ್ಲಾಘಿಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾದ ಎಮ್.ಜಿ.ಸೋಮಣ್ಣರವರು ಹಾಗೂ ಸಿಬ್ಬಂದಿಗಳಾದ ಮಂಜು ಎಸ್, ಅರುಣ್ ಕುಮಾರ್, ಪುಂಡಲೀಕ ಲಮಾಣಿ, ಬಾಳಕೃಷ್ಣ ರವಳೋಜೆ, ಹಾಗೂ ಅಗ್ನಿಶಾಮಕ ಚಾಲಕರಾದ ಸುನೀಲ್ ಕುಮಾರ್ ರವರು ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC