ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿನೊಂದಿಗೆ ಭಾರತೀಯ ರೈಲ್ವೆ. ದೇಶದ ಮೊದಲ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅಯೋಧ್ಯೆ-ದರ್ಭಾಂಗ ಮಾರ್ಗದಲ್ಲಿ ಓಡಲಿದೆ. ಈ ಸೆಮಿ-ಹೈ ಸ್ಪೀಡ್ ರೈಲು ಸಾಮಾನ್ಯ ರೈಲುಗಳಿಗಿಂತ ಕಡಿಮೆ ದರವನ್ನು ನೀಡುತ್ತದೆ. ಇದು ಅಸಾಧಾರಣ ಸೌಲಭ್ಯಗಳನ್ನು ಹೊಂದಿರುವ ನಾನ್-ಎಸಿ ರೈಲು.
ಅಮೃತ್ ಭಾರತ್ ಎಕ್ಸ್ʼಪ್ರೆಸ್ ಅಯೋಧ್ಯೆ–ದರ್ಭಾಂಗ ಮಾರ್ಗದಲ್ಲಿ ಚಲಿಸಲಿದ್ದು, ಎರಡನೆಯದು ಮಾಲ್ಡಾ-ಬೆಂಗಳೂರು ಮಾರ್ಗದಲ್ಲಿ ಚಲಿಸಲಿದೆ. ರಾಜಧಾನಿ ಮತ್ತು ಶತಾಬ್ದಿ ರೈಲುಗಳಂತೆಯೇ ಈ ಸೇವೆಯು ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸುತ್ತದೆ.
ದೇಶದ ಎಲ್ಲಾ ವರ್ಗದ ಜನರಿಗೆ ಆಧುನಿಕ ಸಾರಿಗೆ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅನ್ನು ಪರಿಚಯಿಸಲಾಯಿತು. ಬೋಗಿಗಳು ಎಲ್ ಎಚ್ ಬಿ ಮಾದರಿಯ ಸುಧಾರಿತ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿವೆ.
22 ಬೋಗಿಗಳ ಈ ರೈಲಿನಲ್ಲಿ ಎಸಿ ಕೋಚ್‌ಗಳ ಬದಲಿಗೆ ಸಾಮಾನ್ಯ ಕೋಚ್ ಗಳಿವೆ. ಅಮೃತ್ ಭಾರತ್ ಸಿಸಿಟಿವಿ ಕ್ಯಾಮೆರಾಗಳು, ಆಧುನಿಕ ಶೌಚಾಲಯಗಳು, ಬೋಗಿಗಳಲ್ಲಿ ಸೆನ್ಸಾರ್ ವಾಟರ್ ಟ್ಯಾಪ್ ಗಳು ಮತ್ತು ಮೆಟ್ರೋ ಮಾದರಿಯಲ್ಲಿ ಘೋಷಣೆ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ.


