ಐಸಿಐಸಿಐ ಬ್ಯಾಂಕ್ ಎಟಿಎಂ ಘಟಕದ ಯಂತ್ರಗಳಿಗೆ ತುಂಬಬೇಕಿದ್ದ 24. 17 ಲಕ್ಷ ಸಮೇತ ಪರಾರಿಯಾಗಿದ್ದ ಕಸ್ಟೋಡಿಯನ್ ಸೇರಿ ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಕ್ಯಾಶ್ ಮ್ಯಾನೇಜ್‌ಮೆಂಟ್ ಆ್ಯಂಡ್ ಪೇಮೆಂಟ್ ಸಲ್ಯೂಷನ್ಸ್ (ಸಿ. ಎಂ. ಎಸ್) ಕಂಪನಿ ವ್ಯವಸ್ಥಾಪಕ ಸಿದ್ದರಾಜು ಕಳ್ಳತನ ಸಂಬಂಧ ದೂರು ನೀಡಿದ್ದರು. ಬಂಧಿತರಿಂದ ಸುಮಾರು 121 ಲಕ್ಷ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಮಾಜಿ ಉದ್ಯೋಗಿಯ ಸಂಚು ‘ಸಿ. ಎಂ. ಎಸ್ ಕಂಪನಿಯಲ್ಲಿದ್ದ ಪ್ರಮುಖ ಆರೋಪಿ, ಕೆಲ ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ. ಎಟಿಎಂ ಘಟಕಗಳಿಗೆ ಹಣ ತುಂಬುವ ವಿಷಯ ಆತನಿಗೆ ಗೊತ್ತಿತ್ತು. ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸಬೇಕೆಂದು ತೀರ್ಮಾಸಿದ್ದ ಈತ, ಹಾಲಿ ಉದ್ಯೋಗಿಗಳ ಜೊತೆ ಸೇರಿ ಸಂಚು ರೂಪಿಸಿ ಕೃತ್ಯ ಎಸಗಿದ್ದ’ ಎಂದು ಅಧಿಕಾರಿ ತಿಳಿಸಿದರು.
‘ವಿವಿಧ ಬ್ಯಾಂಕ್ ಗಳ ಎಟಿಎಂ ಘಟಕಗಳಿಗೆ ಹಣ ತುಂಬುವ ಜವಾಬ್ದಾರಿಯನ್ನು ಸಿ. ಎಂ. ಎಸ್ ಕಂಪನಿ ವಹಿಸಿಕೊಂಡಿದೆ. ಕಸ್ಟೋಡಿಯನ್ ಹಾಗೂ ಇತರರು, 7 32 ಲಕ್ಷ ಸಮೇತ ಎಟಿಎಂ ಘಟಕಗಳತ್ತ ತೆರಳಿದ್ದರು. ತಮ್ಮ ಬಳಿಯ ಐಡಿ ನಂಬರ್ ಬಳಸಿ ಕೆಲ ಯಂತ್ರಗಳಿಗೆ ಹಣ ತುಂಬಿದ್ದರು. 7 24.17 ಲಕ್ಷ ಉಳಿಸಿಕೊಂಡಿದ್ದ ಆರೋಪಿಗಳು, ಅದರ ಸಮೇತ
ಪರಾರಿಯಾಗಿದ್ದರು’ ಎಂದು ಹೇಳಿದರು.
‘ಜುಲೈ 7ರಂದು ಮತ್ತೊಂದು ತಂಡದ ಸಿಬ್ಬಂದಿ, ಹಣ ತುಂಬಲು ಎಟಿಎಂ ಘಟಕಕ್ಕೆ ಹೋದಾಗ ಕಳ್ಳತನ ಸಂಗತಿ ಗೊತ್ತಾಗಿತ್ತು. ಸ್ಥಳ ಪರಿಶೀಲನೆ ನಡೆಸಿದಾಗ, ಸಿಬ್ಬಂದಿಯೇ ಹಣ ಕದ್ದುಕೊಂಡು ಹೋಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು’ ಎಂದರು.
5 ಲಕ್ಷ ಹಂಚಿಕೊಂಡು ಪರಾರಿ. ಕಳ್ಳತನ ಬಳಿಕ ತಲಾ 5 ಲಕ್ಷ ಹಂಚಿಕೊಂಡಿದ್ದ ಆರೋಪಿಗಳು, ನಗರ ತೊರೆದಿದ್ದರು. ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು ಎಂದು ಅಧಿಕಾರಿ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


