ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಫ್ಲೆಕ್ಸ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.ಫ್ಲೆಕ್ಸ್ ಹಾಕುವವರು ಯಾರೇ ಆದರೂ ಸರಿ ಅನುಮತಿ ಪಡೆಯಬೇಕು. ಯಾವುದೇ ಪಕ್ಷದ ಫ್ಲೆಕ್ಸ್ ಹರಿಯುವ ಅವಶ್ಯಕತೆ ಇಲ್ಲ ಎಂದರು.
ಪಿಎಫ್ ಐ ಬ್ಯಾನ್ ಎಲೆಕ್ಷನ್ ಗಿಮಿಕ್ ಎಂದ ಬಿಕೆ ಹರಿಪ್ರಸಾದ್ ಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಬಿಕೆ ಹರಿಪ್ರಸಾದ್ ಗೆ ವ್ಯಾಖ್ಯಾನ ಮಾಡಲು ಬರಲ್ಲ. ಪಿಎಫ್ ಐ ಬ್ಯಾನ್ ಗೆ ಎಲ್ಲರೂ ಒತ್ತಾಯಿಸಿದ್ದರು. ಈಗ ಎಲೆಕ್ಷನ್ ಗಿಮಿಕ್ ಅಂತಿರೋದು ಎಷ್ಟು ಸರಿ…? ಎಂದು ಪ್ರಶ್ನಿಸಿದರು.
ಎಸ್ ಡಿಪಿಐ ರಾಜಕೀಯ ಪಕ್ಷ ಅದಕ್ಕೆ ಬೇರೆ ಕಾನೂನಿದೆ ಎಸ್ ಡಿಪಿಐ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗದುಕೊಂಡಿಲ್ಲ ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


