ಕಾರವಾರ: ಅಪರೂಪದ ಹಾರುವ ಅಳಿಲೊಂದನ್ನು ಕಾರವಾರ ತಾಲೂಕಿನ ಕದ್ರಾ ಅರಣ್ಯ ವಲಯದ ವಿರ್ಜೆ ಬೀಟ್ನ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರು ರಕ್ಷಣೆ ಮಾಡಿದ್ದಾರೆ.
ಕೈಗಾ ಟೌನ್ ಶಿಪ್ ನಲ್ಲಿ ತೀವ್ರವಾಗಿ ಗಾಯಗೊಂಡು ಬಿದ್ದಿದ್ದ ಹಾರುವ ಅಳಿಲನ್ನು ಕಂಡ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅಚ್ಚರಿಗೀಡಾಗಿದ್ದಾರೆ.
ಮರದಿಂದ ಮರಕ್ಕೆ ಹಾರುವ ಈ ಅಪರೂಪದ ಅಳಿಲು ಮಲ್ಲಾಪುರ ಟೌನ್ ಶಿಪ್ನ ಎನ್ಪಿಸಿಐಎಲ್ ಸಿಬ್ಬಂದಿಯೋರ್ವರ ಮನೆಯ ಮೇಲೆ ಬಿದ್ದಿತ್ತು. ಈ ಬಗ್ಗೆ ಸ್ಥಳೀಯರು ಬಿಲಾಲ್ ಶೇಖ್ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಬಿಲಾಲ್ ಹಾಗೂ ನಾಗರಾಜ್ ಅವರು ಅಳಿಲಿಗೆ ಚಿಕಿತ್ಸೆ ನೀಡಿದ್ದು, ಬಳಿಕ ಕಾಡಿಗೆ ಬಿಟ್ಟಿದ್ದಾರೆ.
ಹಾರುವ ಅಳಿಲನ್ನು ನೋಡಿ ಆಶ್ಚರ್ಯಗೊಂಡೆ. ಕೆಳಗೆ ಬಿದ್ದ ಪರಿಣಾಮ ಅಳಿಗೆ ತೀವ್ರವಾಗಿ ಗಾಯವಾಗಿತ್ತು. ಅದು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಸುತ್ತಲೂ ಜನರು ನಿಂತಿರುವುದನ್ನು ನೋಡಿ ಆತಂಕಕ್ಕೊಳಗಾಗಿತ್ತು. ಹ್ಯಾಂಡ್ ಗ್ಲೌಸ್ ಧರಿಸಿ ಅಳಿಲಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಿದೆ. ಗಾಯಗೊಂಡಿದ್ದ ಜಾಗದಲ್ಲಿ ಇರುವೆಗಳು ಮುತ್ತಿಕೊಂಡು ಮತ್ತಷ್ಟು ಗಾಯಗೊಳ್ಳುವಂತೆ ಮಾಡಿತ್ತು ಎಂದು ಬಿಲಾಲ್ ಶೇಖ್ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1