ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಜು ಕವಿದ ವಾತಾವರಣ ಹಿನ್ನೆಲೆ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯವುಂಟಾಗಿದೆ ಎಂದು ವರದಿ ತಿಳಿಸಿದೆ.
ಏರ್ ಪೋರ್ಟ್ ನಲ್ಲಿ ಬೆಳಿಗ್ಗೆಯಿಂದ ದಟ್ಟವಾದ ಮಂಜುಮುಸುಕಿರುವ ಹಿನ್ನೆಲೆಯಲ್ಲಿ ವಿಮಾನ ಹಾರಾಟಕ್ಕೆ ಅಡೆತಡೆಯುಂಟಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. 10ಕ್ಕೂ ಹೆಚ್ಚು ವಿಮಾನಗಳ ಟೇಕಾಫ್ , ಲ್ಯಾಂಡಿಂಗ್ ನಲ್ಲಿ ವ್ಯತ್ಯಯವಾಗಿದೆ.
ಏರ್ ಪೋರ್ಟ್ ಹಾಗೂ ಸುತ್ತಮುತ್ತ ಸಂಪೂರ್ಣವಾಗಿ ದಟ್ಟ ಮಂಜಿನಿಂದ ಆವೃತಗೊಂಡಿದ್ದು, ಗೋಚರತೆಯಲ್ಲಿ ಸ್ಪಷ್ಟತೆ ಇಲ್ಲದೇ ಹಲವು ವಿಮಾನಗಳು ಲ್ಯಾಂಡ್ ಮಾಡಲಾಗದೇ ವಾಪಾಸ್ ತೆರಳಿವೆ.
ಕೆಐಎದಲ್ಲಿ ಲ್ಯಾಂಡ್ ಆಗಬೇಕಿದ್ದ ಇಂಡಿಗೋ ವಿಮಾನವೊಂದು ದಟ್ಟ ಮಂಜಿನಿಂದಾಗಿ ಲ್ಯಾಂಡ್ ಮಾಡಲು ಸಾಧ್ಯವಾಗದೇ 45 ನಿಮಿಷಗಳ ಕಾಲ ಆಗಸದಲ್ಲಿಯೇ ಹಾರಾಟ ನಡೆಸಿದೆ. ಆದಾಗ್ಯೂ ವಾತಾವರಣ ಸುದಾರಿಸಿದ ಕಾರಣಕ್ಕೆ ಹೈದರಾಬದ್ ಏರ್ ಪೋರ್ಟ್ ಗೆ ಹಿಂತಿರುಗಿದೆ. ಇದರಿಂದಾಗಿ ಪ್ರಯಾಣಿಕರು ಸಂಕಷ್ಟ ಪಡುವ ಸ್ಥಿತಿಯುಂಟಾಗಿದೆ. ಕೆಐಎನಲ್ಲಿ ಮಂಜು ಕವಿದ ವಾತಾವರಣದಿಂದಾಗಿ 5 ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q