nammatumakuru

    Subscribe to Updates

    Get the latest creative news from FooBar about art, design and business.

    What's Hot

    ಆಟವಾಡುತ್ತಾ ಲೂಡೋ ಕಾಯಿನ್ ನುಂಗಿ ಎಂಟು ವರ್ಷದ ಬಾಲಕಿ ದಾರುಣ ಸಾವು

    February 23, 2026

    ಜೂನ್ ಅಂತ್ಯದೊಳಗೆ ಪಂಚಾಯತ್, ಸ್ಥಳೀಯ ಸಂಸ್ಥೆ ಚುನಾವಣೆ: ಸಿಎಂ ಸಿದ್ದರಾಮಯ್ಯ ಘೋಷಣೆ

    February 23, 2026

    ಸ್ನೇಹಮಯಿ ಕೃಷ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ದೂರಿನ ಬೆನ್ನಲ್ಲೇ ಎಫ್‌ ಐಆರ್ ದಾಖಲು

    February 23, 2026
    Facebook Twitter Instagram
    ಟ್ರೆಂಡಿಂಗ್
    • ಆಟವಾಡುತ್ತಾ ಲೂಡೋ ಕಾಯಿನ್ ನುಂಗಿ ಎಂಟು ವರ್ಷದ ಬಾಲಕಿ ದಾರುಣ ಸಾವು
    • ಜೂನ್ ಅಂತ್ಯದೊಳಗೆ ಪಂಚಾಯತ್, ಸ್ಥಳೀಯ ಸಂಸ್ಥೆ ಚುನಾವಣೆ: ಸಿಎಂ ಸಿದ್ದರಾಮಯ್ಯ ಘೋಷಣೆ
    • ಸ್ನೇಹಮಯಿ ಕೃಷ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ದೂರಿನ ಬೆನ್ನಲ್ಲೇ ಎಫ್‌ ಐಆರ್ ದಾಖಲು
    • ಹಾಸನದಲ್ಲಿ ಭೀಕರ ಅಪಘಾತ: ಬುಲೆಟ್‌ ನಿಂದ ಬಿದ್ದು 23 ವರ್ಷದ ಯುವತಿ ಸಾವು, ಮತ್ತೊಬ್ಬಳು ಗಂಭೀರ
    • ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
    • ನಟ ದರ್ಶನ್‌ ಗೆ ಹೈಕೋರ್ಟ್‌ನಿಂದ ಸಣ್ಣ ರಿಲೀಫ್; ಗನ್ ಲೈಸೆನ್ಸ್ ಅಮಾನತಿಗೆ ತಡೆ
    • ಮಂಜುಗುಣಿ ಸೇತುವೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
    • ಕಾರವಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜಾನಪದ ಹಾಡುಗಾರ್ತಿ– ಕಲಾವಿದೆ ವಡ್ಡಗೆರೆ ಕದರಮ್ಮ ಅವರಿಗೆ 2023–24 ನೇ ವರ್ಷದ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿಯ ಗರಿ!’
    ಲೇಖನ November 4, 2024

    ಜಾನಪದ ಹಾಡುಗಾರ್ತಿ– ಕಲಾವಿದೆ ವಡ್ಡಗೆರೆ ಕದರಮ್ಮ ಅವರಿಗೆ 2023–24 ನೇ ವರ್ಷದ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿಯ ಗರಿ!’

    By adminNovember 4, 2024No Comments3 Mins Read
    vaddagere kadaramma

    1) ಜಾನಪದ ಲೋಕೋತ್ಸವ ಪ್ರಶಸ್ತಿ –2015,

    2) ಜಾನಪದ ತಜ್ಞ — ನಾಡೋಜ ಎಚ್.ಎಲ್.ನಾಗೇಗೌಡ ಜನ್ಮ ಶತಮಾನೋತ್ಸವ ಜಾನಪದ ಲೋಕ ಪ್ರಶಸ್ತಿ-2018,.


    Provided by
    Provided by

    3) ಅಂತರರಾಷ್ಟ್ರೀಯ ಮಹಿಳಾ ಪ್ರಶಸ್ತಿ–2015 (ತುಮಕೂರು ವಿವಿ),

    4) ವೀಚಿ ಸಾಹಿತ್ಯ ಪ್ರಶಸ್ತಿ –2017,

    5) ಬೆಂಗಳೂರು ಸೃಷ್ಟಿಕಲಾ ಮಂದಿರದ ಸೃಷ್ಟಿ ಕಲಾ ಗೌರವ ಪುರಸ್ಕಾರ– 2018,

    6) ಭೀಮಪುತ್ರಿ ಬ್ರಿಗೇಡ್ ‘ಅಕ್ಷರದವ್ವ ಸಾವಿತ್ರಿಬಾ ಫುಲೆ ಪ್ರಶಸ್ತಿ –2021,

    7) ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ತಾಯಮ್ಮ ಎಸ್.ಸಿ.ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿ –2023

    8) ತುಮಕೂರು ಜಿಲ್ಲಾ 2024 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

    ಇನ್ನೂ ಹಲವಾರು ಪ್ರಶಸ್ತಿ- ಗೌರವಗಳನ್ನು ಪಡೆದಿರುವ ಜಾನಪದ ಹಾಡುಗಾರ್ತಿ- ಕಲಾವಿದೆ ವಡ್ಡಗೆರೆ ಕದರಮ್ಮ ಅವರ ಸಾಧನೆಯನ್ನು ಕುರಿತು ಪ್ರಜಾವಾಣಿ ಪತ್ರಿಕೆಯು, ‘ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನ’ದ ಪ್ರಯುಕ್ತ 15–10–2018 ರ ‘ಸಾಧಕಿಯರಿಗೆ ಸಲಾಂ’ ಎಂಬ ವಿಶೇಷ  ವ್ಯಕ್ತಿಚಿತ್ರ ಲೇಖನ ಪ್ರಕಟಿಸಿತ್ತು. ಉದ್ಯಮಶೀಲ ಮಹಿಳೆಯರ ಅಂತರ್ಜಾಲ ಮಾಸಿಕ ‘ಸುನೀತಾ’ ವಡ್ಡಗೆರೆ ಕದರಮ್ಮ ಅವರನ್ನು ಕುರಿತು ವಿಶೇಷ ಸಂದರ್ಶನ ಲೇಖನ ಪ್ರಕಟಿಸಿದೆ. ಲೇಖಕಿ– ಕವಯಿತ್ರಿ ಮಂಜುಳಾ ಭಾರ್ಗವಿ “ಉದ್ದೀಪನ ಕಿಡಿಗಳು” ಎಂಬ ಕೃತಿಯಲ್ಲಿ ವಡ್ಡಗೆರೆ ಕದರಮ್ಮನವರ ಬದುಕು ಮತ್ತು ಸಾಧನೆಯನ್ನು ಕುರಿತು ‘ಅಮ್ಮನೆಂಬ ಅಕ್ಷರದ ದೀವಳಿಗೆ…’ ಎಂಬ ಲೇಖನವನ್ನು ಮತ್ತು ರಂಗಾಭರಣ ಕಲಾ ಕೇಂದ್ರದ ರಂಗಾಭರಣ ಮಾಸ ಪತ್ರಿಕೆಯಲ್ಲಿ “ಜಾನಪದ ಮಹಾ ಕಾವ್ಯಗಳ ಹಾಡುಗಾರ್ತಿ ವಡ್ಡಗೆರೆ ಕದರಮ್ಮ” ಎಂಬ ಲೇಖನ ಬರೆದು ಪ್ರಕಟಿಸಿದ್ದಾರೆ.

    ಅಕ್ಷರ ಕಲಿಯದೆಯೂ ಕರ್ನಾಟಕದ ಎರಡು ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿ (ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಮತ್ತು ತುಮಕೂರು ವಿಶ್ವವಿದ್ಯಾಲಯ) ವಿದ್ಯಾರ್ಥಿಗಳಿಗೆ ವಡ್ಡಗೆರೆ ಕದರಮ್ಮ ಹಾಡಿರುವ “ವಡ್ಡಗೆರೆ ನಾಗಮ್ಮ; ಮಹಾಸತಿ ಕಾವ್ಯ” ಪಠ್ಯ ಪುಸ್ತಕವಾಗಿರುತ್ತದೆ. ಮಾನವ ಕುಲಶಾಸ್ತ್ರೀಯ ಅಧ್ಯಯನಕಾರರು, ಜನಾಂಗೀಯ ಅಧ್ಯಯನಕಾರರು, ಸಮುದಾಯ ಅಧ್ಯಯನಕಾರರು, ಸಾಮಾಜಿಕ ಕಾರ್ಯಕರ್ತರು ಮುಂತಾದವರು ವಡ್ಡಗೆರೆ ಕದರಮ್ಮ ಮತ್ತು ಅವರ ಗೆಳತಿಯರಿಂದ ಜಾನಪದ ಕಾವ್ಯ, ಪದ-ಪುರಾಣಗಳನ್ನು ಹಾಡಿಸುವುದು ಹಾಗೂ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ.

    ಇಂತಹ ಜಾನಪದ ಹಾಡುಗಾರ್ತಿ — ಕಲಾವಿದೆ ವಡ್ಡಗೆರೆ ಕದರಮ್ಮ ಅವರಿಗೆ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಮಹಾಕ್ಷೇತ್ರದಲ್ಲಿ ದಿನಾಂಕ : 23—09–2018 ರ ಭಾನುವಾರ ಬೆಳಗ್ಗೆ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಜಾನಪದ ಕಲಾಮೇಳದಲ್ಲಿ, ಕರ್ನಾಟಕ ಜಾನಪದ ಪರಿಷತ್ತಿನ ಸಂಸ್ಥಾಪಕರಾದ ಜಾನಪದ ತಜ್ಞ — ನಾಡೋಜ ಡಾ.ಎಚ್.ಎಲ್.ನಾಗೇಗೌಡ ಪ್ರಶಸ್ತಿ ಮತ್ತು 10.000 ರೂಪಾಯಿ ನಗದು ಪುರಸ್ಕಾರ ನೀಡಿ ಗೌರವಿಸಿದೆ.

    ವಡ್ಡಗೆರೆ ಕದರಮ್ಮ ತನ್ನ ಸಹಹಾಡುಗಾರ್ತಿ ಕಲಾವಿದೆಯರೊಂದಿಗೆ, ‘ಮಹಾಸತಿ ವಡ್ಡಗೆರೆ ನಾಗಮ್ಮನ ಕಾವ್ಯ’ವನ್ನು ಹರಕೆ ಹೊತ್ತ ಉಪಾಸಕರ ಮನೆಗಳಿಗೆ ಹೋಗಿ ಹಾಡಿಬರುವ ಕಾಯಕವನ್ನು ಕಳೆದ ಐವತ್ತು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ತುಮಕೂರು ಜಿಲ್ಲೆಯ  ಕವಿ-ಗಾಯಕರ ಪೈಕಿ ವಡ್ಡಗೆರೆ ಕದರಮ್ಮನವರಿಗೆ ಪ್ರಧಾನ ಸ್ಥಾನವಿದೆ. ಜಾನಪದ ಕುರಿತ ಇವರ ಅರಿವು ಮತ್ತು ಅಮೂಲ್ಯ ಮಾಹಿತಿಗಳನ್ನು ನಾಡಿನ ಅನೇಕ ಸಂಶೋಧಕರು ತಮ್ಮ ಗ್ರಂಥಗಳಲ್ಲಿ ಬಳಸಿಕೊಂಡಿದ್ದಾರೆ. ಅನೇಕ ಸಂಶೋಧಕರು ಪಿಎಚ್.ಡಿ ಪದವಿಗಳನ್ನೂ ಪಡೆದುಕೊಂಡಿದ್ದಾರೆ. ಅಂತಹ ಕೆಲವು ಗ್ರಂಥಗಳಲ್ಲಿ ವಡ್ಡಗೆರೆ ಗ್ರಾಮದ ನಿವೃತ್ತ ಐ.ಎ.ಎಸ್. ಅಧಿಕಾರಿ ವಿ.ಡಿ.ವೀರಕ್ಯಾತಯ್ಯ ಬರೆದಿರುವ ಕುಂಚಿಟಿಗರ ಜನಾಂಗ – ಇತಿಹಾಸ ಹಾಗೂ ಸಂಪ್ರದಾಯಗಳು (1994), ಎಂ.ವೀರಕ್ಯಾತಯ್ಯ ಬರೆದಿರುವ ವಿಜಯೀ ವೀರಕೇತುರಾಯ (ನಾಟಕ 1999), ಎಂ.ಹೆಚ್. ನಾಗರಾಜು ಅವರ ಸಂಶೋಧನಾ ಕೃತಿ ಕುಂಚಿಟಿಗರ ಸಾಂಸ್ಕೃತಿಕ ಇತಿಹಾಸ (2003), ಡಾ.ರಾಜಣ್ಣ ಹುಣಿಸೇಪಾಳ್ಯ ಅವರ ಮಹಾಸತಿ ಶಿವಶರಣೆ ವೀರನಾಗಮ್ಮದೇವಿ (1996), ಡಾ.ಓ.ನಾಗರಾಜು ಅವರ ಪಿಎಚ್.ಡಿ ಸಂಶೋಧನಾ ಪ್ರಬಂಧ “ತುಮಕೂರು ಜಿಲ್ಲೆಯ ಗ್ರಾಮದೇವತೆಗಳು: ಒಂದು ಅಧ್ಯಯನ” (2007) ಹಾಗೂ ವಡ್ಡಗೆರೆ ನಾಗರಾಜಯ್ಯ ಸಂಪಾದಿಸಿರುವ “ವಡ್ಡಗೆರೆ ನಾಗಮ್ಮ: ಮಹಾಸತಿ ಕಾವ್ಯ” (2010) ಡಾ.ಡಿ.ಎನ್.ರಘುರಾಮ್ ಬರೆದಿರುವ “ವಡ್ಡಗೆರೆ ಶ್ರೀ ವೀರನಾಗಮ್ಮನ ಚರಿತ್ರೆ” ಇನ್ನೂ ಮುಂತಾದ ಕೃತಿಗಳು ಪ್ರಮುಖವಾಗಿವೆ.

    ವಡ್ಡಗೆರೆ ಕದರಮ್ಮ ಅವರು ರಿಯಲ್ ಚಾಲೆಂಜರ್ಸ್ ಟೀಮ್ಗಾಗಿ ಈಶ್ವರ್ ಗುಬ್ಬಿ ನಿರ್ದೇಶಿಸಿ, ಶ್ರೀ ರಾಘವ್ ನಿರ್ಮಿಸಿರುವ ‘‘ಮುಗ್ಧ”  ಸಾಕ್ಷ್ಯ ಚಿತ್ರದಲ್ಲಿ ಮುಗ್ದ ಯುವಕನೊಬ್ಬನ ತಾಯಿಯ ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ.. ಪ್ರಸ್ತುತ ಜಾನಪದ ಗಾಯಕಿಯರಾದ ವಡ್ಡಗೆರೆ ಕದರಮ್ಮ(80) ಹಾಗೂ ವಡ್ಡಗೆರೆ ಮುದ್ದನಾಗಮ್ಮ(75) ವಡ್ಡಗೆರೆ ನಾಗಮ್ಮನ ಕಥಾಕಾವ್ಯವನ್ನು ಮೂಲ ಧಾಟಿಯಲ್ಲಿ ನಿರೂಪಿಸುವ ಅಸಲಿ ಹಾಡುಗಾರ್ತಿಯರಾಗಿದ್ದಾರೆ.

    ವಡ್ಡಗೆರೆ ನಾಗಮ್ಮನ ಪದಗಳು, ಗಂಗೆ–ಗೌರಿ ಕಾವ್ಯ, ಬಿಲ್ಲಾಳರಾಯ– ಗೊಲ್ಲಾಳರಾಯನ ಪದ, ಬೆಟ್ಟದ ಮದ್ದೆಮ್ಮನ ಪದ, ಗುಣಸಾಗರಿ ಕಾವ್ಯ, ಕರಿಭಂಟನ ಪದ, ತತ್ವಪದ, ಆಂಜನೇಯನ ಪದ, ಚಂದ್ರಮನ ಪದ, ಜಾಂಬವರ ಪದ, ಮಾರಮ್ಮನ ಪದ, ಕರಿಯಮ್ಮನ ಪದ, ಆದಿಜಾಂಬವ ಪುರಾಣ, ಒಸಗೆ ಪದ, ಮದುವೆ– ಸೋಬಾನೆ ಸಂಪ್ರದಾಯದ ಪದಗಳು, ಹಸೆ ಪದಗಳು, ಸುಗ್ಗಿ ಪದಗಳು, ಲಾಲಿ ಹಾಡುಗಳು, ಗಂಗಭಾರತ ಕಾವ್ಯ ಮುಂತಾದ ಅನೇಕ ಜಾನಪದ ಹಾಡುಗಬ್ಬಗಳನ್ನು ಹಾಡುವಲ್ಲಿ ಸುತ್ತಮುತ್ತಲ ಊರುಗಳಲ್ಲಿ ಹೆಸರಾಗಿದ್ದಾರೆ. ಇವರಿಗೆ ಹಾಡುಗಾರಿಕೆ ಕಲಿಸಿಕೊಟ್ಟ ಕೆಂಪನಾಗಮ್ಮಜ್ಜಿ ಎಂಬ ಮುಖ್ಯ ಕಲಾವಿದೆಯು ನಿಧನರಾದ ಬಳಿಕ, ವಡ್ಡಗೆರೆ ಕದರಮ್ಮನವರು ಮುಮ್ಮೇಳದ ಮುಖ್ಯ ಕವಯಿತ್ರಿ -ಹಾಡುಗಾರ್ತಿಯಾಗಿ ತನ್ನ ತಂಡವನ್ನು ಮುನ್ನಡೆಸುವುದರೊಂದಿಗೆ ಹೊಸ ತಲೆಮಾರಿನವರಿಗೆ ಜಾನಪದ ಹಾಡುಗಳನ್ನು ಕಲಿಸಿಕೊಡುತ್ತಿದ್ದಾರೆ.

    ನನ್ನ ಅಮ್ಮನಿಗೆ ನಿಮ್ಮ ಶುಭ ಹಾರೈಕೆಗಳಿರಲಿ..

    ವಂದನೆಗಳೊಂದಿಗೆ…

    –ಡಾ.ವಡ್ಡಗೆರೆ ನಾಗರಾಜಯ್ಯ         


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

    February 23, 2026

    ಹಾಸ್ಯ ಡ್ರಾಮ: ಅರಳಿ ಕಟ್ಟೆ ಮಿತ್ರರು

    February 18, 2026

    ಪೆರು ದೇಶದ ಈ ವಿಚಿತ್ರ ಮಾರುಕಟ್ಟೆ ನೋಡಿದ್ರೆ ನೀವು ಬೆಚ್ಚಿಬೀಳ್ತೀರಾ!

    February 17, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಆಟವಾಡುತ್ತಾ ಲೂಡೋ ಕಾಯಿನ್ ನುಂಗಿ ಎಂಟು ವರ್ಷದ ಬಾಲಕಿ ದಾರುಣ ಸಾವು

    February 23, 2026

    ಮಂಗಳೂರು: ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಲೂಡೋ ಕಾಯಿನ್ (ದಾಳ) ನುಂಗಿದ ಪರಿಣಾಮ ಎಂಟು ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ…

    ಜೂನ್ ಅಂತ್ಯದೊಳಗೆ ಪಂಚಾಯತ್, ಸ್ಥಳೀಯ ಸಂಸ್ಥೆ ಚುನಾವಣೆ: ಸಿಎಂ ಸಿದ್ದರಾಮಯ್ಯ ಘೋಷಣೆ

    February 23, 2026

    ಸ್ನೇಹಮಯಿ ಕೃಷ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ದೂರಿನ ಬೆನ್ನಲ್ಲೇ ಎಫ್‌ ಐಆರ್ ದಾಖಲು

    February 23, 2026

    ಹಾಸನದಲ್ಲಿ ಭೀಕರ ಅಪಘಾತ: ಬುಲೆಟ್‌ ನಿಂದ ಬಿದ್ದು 23 ವರ್ಷದ ಯುವತಿ ಸಾವು, ಮತ್ತೊಬ್ಬಳು ಗಂಭೀರ

    February 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.