ಸಂಪೂರ್ಣವಾಗಿ ಕಚ್ಚಾ ವೇಗನ್ ಅರ್ಥಾತ್ ಸಸ್ಯಜನ್ಯ ಆಹಾರವನ್ನು ಸೇವಿಸುತ್ತಿದ್ದ ರಶ್ಯದ ಮಹಿಳೆ ಝನ್ನಾ ಸ್ಯಾಮ್ಸೊನೋವಾ ಅವರು ನಿಧನರಾಗಿದ್ದಾರೆ. ಅವರಿಗೆ 39 ವರ್ಷವಾಗಿತ್ತು. ಹಸಿವೆಯಿಂದ ಅವರ ಸಾವು ಸಂಭವಿಸಿದೆ ಎನ್ನಲಾಗಿದೆ.
ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈಕೆ ಕಚ್ಚಾ ಆಹಾರಗಳ ಬಗ್ಗೆ ಪ್ರಚಾರ ಮಾಡುತ್ತಿದ್ದರು. ಝನ್ನಾ ಕನಿಷ್ಠ ನಾಲ್ಕು ವರ್ಷಗಳಿಂದ ಸಂಪೂರ್ಣ ಕಚ್ಚಾ ವೇಗನ್ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಅವರು ಕೇವಲ ಹಣ್ಣುಗಳು, ಮೊಳಕೆ ಬರಿಸಿದ ಸೂರ್ಯಕಾಂತಿ ಬೀಜಗಳು, ಹಣ್ಣುಗಳ ರಸಗಳನ್ನು ಸೇವಿಸುತ್ತಿದ್ದರು.
ತನ್ನ ಮಗಳ ಸಾವಿಗೆ ‘ಕಾಲರಾ ತರಹದ ಸೋಂಕು’ ಕಾರಣವೆಂದು ಝನ್ನಾರ ತಾಯಿ ಹೇಳಿದ್ದು ಆದರೆ, ಅವರ ಸಾವಿಗೆ ಅಧಿಕೃತ ಕಾರಣವನ್ನು ಘೋಷಿಸಲಾಗಿಲ್ಲ. ತಮ್ಮ ಪುತ್ರಿಯ ಸಾವಿಗೆ ಕಾರಣವನ್ನು ನಿರ್ಧರಿಸುವ ವೈದ್ಯಕೀಯ ವರದಿ ಮತ್ತು ಮರಣ ಪ್ರಮಾಣಪತ್ರಕ್ಕಾಗಿ ಕುಟುಂಬವು ಕಾಯುತ್ತಿದ್ದು, ಆಲ್ – ವೀಗನ್ ಡಯಟ್‌ನಿಂದ ಬಳಲಿಕೆ ಮತ್ತು ಅವಳ ದೇಹದ ಮೇಲೆ ಒತ್ತಡ ಉಂಟಾಗಿ ಮೃತಟ್ಟಿರಬಹುದು ಎಂದೂ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


