ಕಲಬುರಗಿ: ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆಗೆ ಎಲ್ಲಾ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲಿ ಸಂಸದ ಅಸಾದುದ್ದೀನ್ ಓವೈಸಿ ವಿವಾದತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ರಾಮ ಮಂದಿರ ಇರುವ ಜಾಗದಲ್ಲಿ 500 ವರ್ಷಗಳ ಕಾಲ ಮುಸ್ಲಿಮರು ನಮಾಜ್ ಮಾಡಿದ್ದಾರೆ ಎನ್ನುವ ಮೂಲಕ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನ ಜಿ.ಬಿ ಪಂತ್ ಮುಖ್ಯಮಂತ್ರಿ ಆಗಿದ್ದಾಗ ರಾಜ್ ಕೆ ಅಂಧೇರಿಯಲ್ಲಿ ರಾಮನ ಮೂರ್ತಿ ಇಡಲಾಗಿತ್ತು. 1992 ರಲ್ಲಿ ಬಿಜೆಪಿ ಸಂಘ ಪರಿವಾರ ಸುಪ್ರೀಂಕೋರ್ಟ್ ಮುಂದೆ ಪ್ರಮಾಣ ಮಾಡಿ ಬಾಬ್ರಿ ಮಸೀದಿ ಕೆಡವಿದರು. 1989 ರಲ್ಲಿ ಪಾಲನ್‍ಪುರದಲ್ಲಿ ಬಿಜೆಪಿ ರೆಸ್ಯೂಲೇಷನ್ ಪಾಸ್ ಮಾಡಿತ್ತು. ವಿಶ್ವ ಹಿಂದೂ ಪರಿಷತ್ ಹುಟ್ಟಿಕೊಂಡಾಗ ರಾಮಮಂದಿರ ಇರಲಿಲ್ಲ. ಮಹಾತ್ಮಾ ಗಾಂಧಿಯವರು ಈ ವಿಚಾರದಲ್ಲಿ ಏನಾದರೂ ಹೇಳಿದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.


