ಅಯೋಧ್ಯೆಯನ್ನು ಮಾದರಿ ಸೌರ ನಗರವನ್ನಾಗಿ ಪರಿವರ್ತಿಸಲು ಯೋಗಿ ಆದಿತ್ಯನಾಥ್ ಸರ್ಕಾರ ಪ್ರಯತ್ನಿಸುತ್ತಿದೆ. ಭಾರತದಲ್ಲಿ ಪ್ರಥಮ ಬಾರಿಗೆ ಸೋಲಾರ್ ಬೋಟ್ ಮೂಲಕ ಸರಯು ಯಾತ್ರೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.
ಸರಯೂ ನದಿಯಲ್ಲಿ ಸೌರ ಶಕ್ತಿಯ ಇ-ಬೋಟ್ ಅನ್ನು ಪ್ರಾರಂಭಿಸಲಾಗಿದೆ. ಉತ್ತರ ಪ್ರದೇಶ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಂಸ್ಥೆ ಅಯೋಧ್ಯೆಯ ಸರಯೂ ನದಿಯಲ್ಲಿ ಬೋಟ್ ಸೇವೆಯ ನಿಯಮಿತ ಕಾರ್ಯಾಚರಣೆಗೆ ರೂಪುರೇಷೆ ಸಿದ್ಧಪಡಿಸಿದೆ.
ಸರಯೂ ಘಾಟ್ ನ ದಡದಲ್ಲಿ ದೋಣಿಯನ್ನು ಜೋಡಿಸಲು, ಪ್ರತಿ ಮೂಲೆಯಿಂದ ಬಿಡಿ ಭಾಗಗಳು ಮತ್ತು ಇತರ ಉಪಕರಣಗಳನ್ನು ತರಲಾಗಿದೆ. ಪ್ರಸ್ತುತ, ಒಂದು ಬೋಟ್ ಮುಗಿದ ನಂತರ, ಪರೀಕ್ಷಾ ಹಂತದ ಪ್ರಕ್ರಿಯೆ ನಡೆಯುತ್ತಿದೆ. ಜನವರಿ 22 ರಂದು ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಲಾರ್ ಬೋಟ್ ಉದ್ಘಾಟಿಸಬಹುದು ಎಂದು ಹೇಳಲಾಗುತ್ತಿದೆ.
ಮುಂದಿನ ದಿನಗಳಲ್ಲಿ ನಿಯಮಿತವಾಗಿ ಬೋಟ್ ಕಾರ್ಯಾಚರಣೆ ನಡೆಸಲಾಗುತ್ತದೆ. ಡ್ಯುಯಲ್ ಮೋಡ್ ಆಪರೇಟಿಂಗ್ ಬೋಟ್ ಆಗಿದ್ದು 100 ಪ್ರತಿಶತ ಸೌರ ವಿದ್ಯುತ್ ಬೇಸ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಸೌರಶಕ್ತಿಯಿಂದ ಚಾರ್ಜ್ ಮಾಡುವುದರ ಹೊರತಾಗಿ, ಇದನ್ನು ವಿದ್ಯುತ್ ಶಕ್ತಿಯ ಮೂಲಕವೂ ನಿರ್ವಹಿಸಬಹುದು ಎನ್ನಲಾಗಿದೆ.


