ಮಧ್ಯಪ್ರದೇಶ: ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಿದ್ದರು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ದಾಮೋಹ್‌ನಲ್ಲಿರುವ ಖಾಸಗಿ ಶಾಲೆಯೊಂದು ಇದೀಗ ವಿವಾದಕ್ಕೀಡಾಗಿದೆ. ಒಂದಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಅವರ ಪೋಸ್ಟರ್ನ್ನು ಶಾಲೆಯ ಗೋಡೆಯ ಮೇಲೆ ಅಂಟಿಸಬೇಕಿತ್ತು. ಆ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೂ ಬಲವಂತವಾಗಿ ಹಿಜಾಬ್ ಹಾಕಿಸಲಾಗಿತ್ತು ಎನ್ನಲಾಗಿದೆ.
ಮಧ್ಯಪ್ರದೇಶದ ಶಿಕ್ಷಣ ಸಚಿವ ನರೋತ್ತಮ್ ಸಿಂಗ್ ಮಾತನಾಡಿ, ಈ ಕುರಿತು ಬಾಲಕಿಯ ಕುಟುಂಬದವರು ಯಾವುದೇ ದೂರು ನೀಡಿಲ್ಲ, ಆದರೆ ತನಿಖೆ ನಡೆಸುವಂತೆ ಎಸ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಗಂಗಾ-ಜಮುನಾ ಕಾನ್ವೆಂಟ್ ಶಾಲೆಯನ್ನು ಮುಸ್ಲಿಂ ಸಂಘಟನೆ ನಡೆಸುತ್ತಿದೆ. ವಾಸ್ತವವಾಗಿ ಈ ಸ್ಕಾರ್ಫ್ ಶಾಲೆಯ ಸಮವಸ್ತ್ರದ ಒಂದು ಭಾಗವಾಗಿದೆ. ಶಾಲೆಯ ಎಲ್ಲಾ ಮಕ್ಕಳು ಧರಿಸಬಹುದು, ಆದರೆ ಯಾರ ಮೇಲೂ ಒತ್ತಡವಿಲ್ಲ.
ಶಾಲಾ ಸಮವಸ್ತ್ರದಲ್ಲಿ ಸ್ಕಾರ್ಫ್ ಇದೆ ಎಂದು ಶಾಲೆಯ ನಿರ್ದೇಶಕ ಮುಸ್ತಾಕ್ ಖಾನ್ ಅವರು ಹೇಳಿದ್ದಾರೆ. ಆದರೆ ಅದನ್ನು ಧರಿಸಲು ಯಾರೂ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ. ಹಿಂದೂ ಸಂಘಟನೆಯ ದೂರಿನ ನಂತರ ಈ ಬಗ್ಗೆ ತನಿಖೆ ಆರಂಭವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


