ಸರಗೂರು: ನಿರಂತರವಾಗಿ ದಶಕಗಳ ಕಾಲ ನಮ್ಮ ಸಂಘ ಕಣ್ಣೀರು ಒರೆಸಲು, ನ್ಯಾಯ ಕೊಡಿಸುವ ಅತ್ಯಂತ ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬರುತ್ತಿದೆ ಎಂದು ವನ್ಯಜೀವಿ ಮಂಡಳಿ ಸದಸ್ಯ ಹಾಗೂ ಅರಣ್ಯ ಇಲಾಖೆ ಹೊರಗುತ್ತಿಗೆದಾರ ನೌಕರರ ಸಂಘದ ರಾಜ್ಯಾಧ್ಯಕ್ಷ ಹಾಗೂ ವಕೀಲ ಸಂಕೇತ ಪುಯ್ಯಯ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರದಂದು ಅರಣ್ಯ ಇಲಾಖೆ ಹೊರಗುತ್ತಿಗೆದಾರ ನೌಕರರ ರಾಜ್ಯ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸಭೆ ನೌಕರರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅತ್ಯಂತ ಪವಿತ್ರ ಗ್ರಂಥವನ್ನು ನಮಗಾಗಿ ಕೊಟ್ಟು ಹೋಗಿದ್ದಾರೆ. ನಮಗೆ ಸಮಾನತೆ ಸಿಕ್ಕುತ್ತದೆ ಎಂದರೆ ಅದು ಸಂವಿಧಾನ ಮೂಲಕ ನಮಗೆ ದೊರೆಯುತ್ತವೆ ಎಂದರು.
ನಾಗರಹೊಳೆ, ಹುಣಸೂರು, ವೀರಹೊಸಹಳ್ಳಿ, ಕಲ್ಲಹಳ್ಳ, ಮೇಟಿಕುಪ್ಫೆ, ಮತ್ತಿ, ಅಂತರಸಂತೆ, ಡಿಪಿಕುಪ್ಪೆ ವಲಯಗಳಲ್ಲಿ ಹೊರಗುತ್ತಿಗೆದಾರಗಿ ನೌಕರರಾಗಿ ಕೆಲಸ ಮಾಡುತ್ತಿದ್ದು, ಅವರ ತಿಂಗಳ ಸ್ಯಾಲರಿ ಹಾಗೂ ಪಿಎಫ್ ಸರಿಯಾಗಿ ನೀಡುತ್ತಿಲ್ಲ ಎಂದು ನಮ್ಮ ಗಮನಕ್ಕೆ ತಂದಿದ್ದಿರಾ, ಅದರಂತೆ ನಾವು ದಿನನಿತ್ಯ ಕಾಡಿನಲ್ಲಿ ಕೆಲಸ ಮಾಡಿಕೊಂಡು ಬಂದರೂ ತಿಂಗಳಲ್ಲಿ ಸ್ಯಾಲರಿ ಇಲ್ಲದೆ ಯಾವ ರೀತಿಯಲ್ಲಿ ನಾವು ಬದುಕ ಬೇಕು ಎನ್ನುವ ಪ್ರಶ್ನೆ ಉಂಟು ಮಾಡಿದೆ ಎಂದರು.
ಇಂದು ವೀರ ಹೊಸಹಳ್ಳಿ ಗಜಪಯಣ ನಡೆಯುತ್ತಿದೆ. ಆನೆಯನ್ನ ಸಂರಕ್ಷಣಾ ಮಾಡುತ್ತಿರುವುದು ಹಾಗೂ ದಸರಾಕ್ಕೆ ಮೆರಗು ತರುವಂತಹ ಕೆಲಸ ಪೋಷಣೆ ಮತ್ತು ಪ್ರಕೃತಿಯನ್ನು ರಕ್ಷಿಸುವುದರಲ್ಲಿ ಪ್ರಮುಖ ಪಾತ್ರ ವಾಗಿರುತ್ತದೆ ಎಂದು ತಿಳಿಸಿದರು.
ವನ್ಯಜೀವಿಯನ್ನು 24 ಗಂಟೆ ಕಾಲ ಕಾಯುತ್ತಿರುವ ನಿಮ್ಮ ಕಣ್ಣಿರು ಒರೆಸಲುವಂತಹ ಸಭೆ ಇನ್ನೂ ಜೀವಂತವಾಗಿದೆ. ವನ್ಯಜೀವಿ ಪ್ರವಾಸಕ್ಕೆ ಬಂದಿದ್ದ ನಮ್ಮ ದೇಶ ಹಾಗೂ ವಿದೇಶದ ವ್ಯಕ್ತಿಗಳಿಗೆ ಹುಲಿಯನ್ನು ಸಂರಕ್ಷಣಾ ಮಾಡಿದಂತಹವನ್ನು ಕಣ್ಣಿರನಲ್ಲಿ ಇದ್ದಾನೆ ಎಂದು ಯಾರಿಗೂ ಗೊತ್ತಾಗುವುದಿಲ್ಲ.ಅದರೆ ಅವರ ಖುಷಿಯಲ್ಲಿ ಹೊರಗುತ್ತಿಗೆದಾರ ನೌಕರರ ಜೀವನ ಮಾಡುವಂತ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.ಅವರ ಬಗ್ಗೆ ಅಧಿಕಾರಿಗಳಿಗೆ ಚಿತ್ತಿಸು ಕನಿಕರ ಇರುವುದಿಲ್ಲ. ನಮ್ಮ ಮೇಲೆ 20 ರಿಂದ 25 ವರ್ಷಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಸಂಪೂರ್ಣವಾಗಿ ಹೊರಗಡೆ ಹಾಕಿ. ಹೊಸದಾಗಿ ಇನ್ನೊಬ್ಬರನ್ನು ಕರೆದುಕೊಂಡು ನಮಗೆ ಏನು ಮಾಡಿದ್ರು ಅದನ್ನೇ ಅವರಿಗೂ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸದಾ ನಮ್ಮ ಮೇಲೆ ಅನ್ಯಾಯವಾಗಿರುತ್ತದೆ. ಅದು ಯಾವ ರೀತಿ ಪರಿಯರ ಕಂಡುಕೊಳ್ಳಬೇಕು ಅನ್ನುವುದು ನಿಮ್ಮ ಪ್ರಶ್ನೆಯಾಗಿದೆ. ನಾಗರಹೋಳೆಯ ಗೇಟ್ ಯನ್ನು ಮುಚ್ಚಿ ಹೋರಾಟ ಮಾಡಿ.ನಮ್ಮ ಯಾವ ರೀತಿ ಬೇಡಿಕೆಗಳನ್ನು ಸ್ಪಂದನೆಯನ್ನು ಸರ್ಕಾರದಿಂದ ಪಡೆದುಕೊಳ್ಳುವ ರೀತಿಯಲ್ಲಿ ನಾವು ಹೋರಾಟ ಮಾಡಬೇಕು. ನಾವುಗಳು ಎಷ್ಟೋ ಸಭೆಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಆದರೆ ನಮಗೆ ಪರಿಹಾರ ಸಿಗುತ್ತಿದೆಯೇ ಎಂಬುದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಅರಣ್ಯ ಇಲಾಖೆ ಹೊರಗುತ್ತಿಗೆದಾರ ನೌಕರರ ಸಂಘದ ಗೌರವಾಧ್ಯಕ್ಷ ಎ.ಎಂ. ನಾಗರಾಜು ರವರು ನೌಕರರ ಬಗ್ಗೆ ಸಮಸ್ಯೆ ಬಗೆಹರಿಸಲು ನಿಟ್ಟಿನಲ್ಲಿ ನಾವು ಹೋರಾಟದ ಮೂಲಕ ನಿರತವಾಗಿ ಮಾಡಿಕೊಂಡು ಬರುತ್ತಿದ್ದು.ನಾವು ಇವಾಗ ಒಂದೊಂದು ವಲಯದಲ್ಲಿ ಸಂಘಟನೆ ಮಾಡಿಕೊಂಡು ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಎಸ್ ಎಸ್ ಹರೀಶ್, ವೀರಭದ್ರ, ಸಂಘದ ಸಂಘಟನೆಕಾರ ಅಣ್ಣಯ್ಯ ಸ್ವಾಮಿ, ನಿಸಾರ್, ಸಿದ್ದಲಿಂಗ, ವಿವಿಧ ವಲಯ ಸಂಘದ ಮುಖಂಡರು ನಾಗೇಗೌಡ, ದಿನೇಶ್, ಕಾಳಯ್ಯ, ದೊರೆಸ್ವಾಮಿ, ಶಿವಣ್ಣ ಇನ್ನೂ ನೌಕರರ ಸಂಘದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC