ಟಿಡಿಪಿ ಅಧ್ಯಕ್ಷ ಹಾಗೂ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ. ಆಂಧ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಈ ಬಂಧನ ನಡೆದಿದೆ. ಇಂದು ಬೆಳಗ್ಗೆ ಅವರನ್ನು ಬಂಧಿಸಲಾಗಿದೆ.
ಜಾಮೀನು ರಹಿತ ಸೆಕ್ಷನ್ ಗಳನ್ನು ವಿಧಿಸಲಾಗಿದೆ. 250 ಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನವಾಗಿದೆ. ಬಂಧನದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚಂದ್ರಬಾಬು ನಾಯ್ಡು, ಬಂಧನದ ಬಗ್ಗೆ ನನಗೆ ಗೊತ್ತಿಲ್ಲ.
ನಾಯ್ಡು ಅವರನ್ನು ಆಂಧ್ರದ ನಂತ್ಯಾಲ್ ನಲ್ಲಿ ಆಂಧ್ರ ಪೊಲೀಸರ ಸಿಐಡಿ ವಿಭಾಗ ಬಂಧಿಸಿದೆ. ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್ ವೇರ್ ಆಫ್ ಇಂಡಿಯಾ ಎಂಬ ಕಂಪನಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಕೋಟಿ ಕೋಟಿ ವಂಚಿಸಿದ ಪ್ರಕರಣ ಇದಾಗಿದೆ. 2014ರಲ್ಲಿ ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಆಂಧ್ರ ಸರ್ಕಾರ ಈ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.


