ತುಮಕೂರು: ಹಾಲಿ ಶಾಸಕ ಸುರೇಶ್ ಗೌಡ ವಿರುದ್ಧ ಮಾಜಿ ಶಾಸಕ ಗೌರಿಶಂಕರ್ ವಾಗ್ದಾಳಿ ನಡೆಸಿದ್ದು, ಚುನಾವಣೆಗೂ ಮುನ್ನ ನೀಡಿದ ಒಂದು ಭರವಸೆ ಈಡೇರಿಸಿಲ್ಲ. ಒಂದು ಭರವಸೆ ಈಡೇರಿಸಲಾಗದ ‘ನರಸತ್ತ ಶಾಸಕ’ ಸುರೇಶ್ ಗೌಡ ಎಂದು ಗೌರಿಶಂಕರ್ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ ಗೌರಿಶಂಕರ್, ಟೀಕಿಸುವ ಭರದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದರು.
ಮೊನ್ನೆ ಪ್ರಯಾಗ್ ರಾಜ್ ಗೆ ಹೋಗಿ ಸ್ನಾನ ಮಾಡಿಕೊಂಡು ಬಂದಿದ್ದಾರೆ. ಪಾಪಗಳನ್ನೆಲ್ಲ, ಮಾಡಿರುವ ತಪ್ಪುಗಳನ್ನೆಲ್ಲ ತಿದ್ದಿಕೊಂಡು ಬರ್ತರೆ ಮನುಷ್ಯ ಅನ್ಕೊಂಡೆ. ಇನ್ನು ಮುಂದೆ ಒಳ್ಳೆಯವನಾಗುತ್ತಾನೆ, ಒಳ್ಳೆ ಬುದ್ದಿ ಕಲಿತಾನೆ, ಜನಗಳಿಗೆ ಗೌರವ ಕೊಡುತಾನೆ, ಒಳ್ಳೆ ಕೆಲಸ ಮಾಡ್ತಾನೆ ಅನ್ಕೊಂಡೆ. ಎಲ್ಲ ಉಲ್ಟಾ ಆಗಿದೆ ಪ್ರಯಾಗ್ ರಾಜ್ ಹೋಗಿ ಗಂಗಾ ನದಿಯಲ್ಲಿ ಸ್ನಾನ ಮಾಡಿ, ಬಂದ ಮೇಲೆ ಪಾಪ ಜಾಸ್ತಿ ಮಾಡ್ತಿದಾನೆ, ಎಲ್ಲೋ ಒಂದು ಕಡೆ ಆತನಿಗೆ ಶಾಪ ವಿಮೋಚನೆ ಆಗಿಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಮತ್ತೊಂದು ಕಡೆ ಆ ಕುಂಭಮೇಳ ಸಕ್ಸಸ್ ಆಗಿಲ್ಲ ಅಂತ ಕಾಣ್ತದೆ ಸುರೇಶ್ ಗೌಡನಿಗೆ, ಕರ್ನಾಟಕ ರಾಜ್ಯದಲ್ಲಿ ಕುಂಭ ಮೇಳ ಮಾಡ್ಲಿಕ್ಕೆ ಹೊರಟಿದ್ದಾರೆ ನಮ್ಮ ಸರ್ಕಾರದವರು. ತಲಕಾಡಿನಲ್ಲಿ ಮಾಡಲಿಕ್ಕೆ ಹೊರಟಿದಾರೆ, ಅಲ್ಲಾದ್ರೂ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಪಾಪ ತೊಳೆದು ಕೊಳ್ತಾರ ಅಂತ ಕಾದು ನೋಡಬೇಕು ಎಂದರು.
ಸುಳ್ಳು ಹೇಳೋದು ಕಮ್ಮಿ ಮಾಡಲಿಲ್ಲ ಅಂದ್ರೆ, ನಾನೇ ಒಂದು ಕಾರು ಕೊಟ್ಟು ಕಾವೇರಿ ನದಿಗೆ ಕರ್ಕೊಂಡು ಹೋಗಿ, ಆ ಕಾವೇರಿ ನೀರಲ್ಲಿ ಮೂರು ಸರಿ ಮುಳುಗಿಸಿ ಕರ್ಕೊಂಡು ಬರ್ತೀನಿ. ಈ ಜಿಲ್ಲೆಯ ಒಳಿತಿಗಾಗಿ, ನಮ್ಮ ಕ್ಷೇತ್ರದ ಜನತೆಗಾಗಿ ರಿಕ್ವೆಸ್ಟ್ ಮಾಡಿ ಕೊಳ್ಳುತ್ತೇನೆ ಎಂದು ಶಾಸಕ ಬಿ. ಸುರೇಶ್ ಗೌಡ ವಿರುದ್ಧ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4