ಕ್ಯಾಲಿಫೋರ್ನಿಯಾದಲ್ಲಿ ಮಲಯಾಳಿ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿರುವ ಘಟನೆ ನಿಗೂಢವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೇಹಗಳ ಬಳಿ ಪಿಸ್ತೂಲ್ ಪತ್ತೆಯಾಗಿದೆ.
ಆರಂಭದಲ್ಲಿ ಎಸಿ ಅಥವಾ ಚಳಿಗಾಲದಲ್ಲಿ ಬಳಸುವ ಹೀಟರ್ ನಿಂದ ವಿಷಕಾರಿ ಅನಿಲವನ್ನು ಉಸಿರಾಡಿದ್ದೇ ಸಾವಿಗೆ ಕಾರಣ ಎಂಬ ಶಂಕೆಯನ್ನು ಸಂಬಂಧಿಕರು ಹಂಚಿಕೊಂಡಿದ್ದರು. ನಂತರ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸಾವಿನ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿದೆ.
ಕೇರಳದ ಕೊಲ್ಲಂನ ಒಂದೇ ಕುಟುಂಬದ ನಾಲ್ವರು ಕ್ಯಾಲಿಫೋರ್ನಿಯಾದ ತಮ್ಮ ಮನೆಯೊಳಗೆ ಕಳೆದ ದಿನ ಶವವಾಗಿ ಪತ್ತೆಯಾಗಿದ್ದಾರೆ. ಫಾತಿಮಾ ಮಾತಾ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಜಿ. ಹೆನ್ರಿ ಅವರ ಪುತ್ರ ಆನಂದ್ ಸುಜಿತ್ ಹೆನ್ರಿ(42) ಮತ್ತು ಅವರ ಪತ್ನಿ ಆಲಿಸ್ ಪ್ರಿಯಾಂಕಾ(40) ಮತ್ತು ಅವರ ಅವಳಿ ಮಕ್ಕಳಾದ ನೋಹ್ ಮತ್ತು ನೀಥಾನ್(4) ಮೃತರು.
ಆನಂದ್ ಸುಜಿತ್ ಮತ್ತು ಅವರ ಪತ್ನಿ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಇಬ್ಬರ ಮೃತದೇಹಗಳು ಮನೆಯ ಸ್ನಾನಗೃಹದಲ್ಲಿ ಪತ್ತೆಯಾಗಿವೆ. ವಿವರವಾದ ತನಿಖೆ ನಡೆಯುತ್ತಿದೆ ಎಂದು ಸ್ಯಾನ್ ಮಾಟಿಯೊ ಪೊಲೀಸರು ತಿಳಿಸಿದ್ದಾರೆ.


