ರಜೆಗೆಂದು ಭಾರತಕ್ಕೆ ಬಂದಿದ್ದ ಕುಟುಂಬವೊಂದು ಕುವೈತ್ ಗೆ ಮರಳಿದ ಅದೇ ದಿನ ತಮ್ಮ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ. ಕುವೈತ್ ನ ಭಾರತೀಯ ರಾಯಭಾರ ಕಚೇರಿಯು “ಕಳೆದ ರಾತ್ರಿ ಅಬಾಸಿಯಾದಲ್ಲಿನ ತಮ್ಮ ಫ್ಲಾಟ್ ನಲ್ಲಿ ಬೆಂಕಿಯಿಂದಾಗಿ ಮ್ಯಾಥ್ಯೂಸ್ ಮುಲಕ್ಕಲ್, ಅವರ ಪತ್ನಿ ಮತ್ತು 2 ಮಕ್ಕಳ ದುರಂತ ಸಾವಿನ ಬಗ್ಗೆ ಕುವೈತ್ ನ ಭಾರತೀಯ ರಾಯಭಾರ ಕಚೇರಿ ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ.
ಅಬ್ಬಾಸಿಯಾ ಪ್ರದೇಶದ ಒಂದು ಕಟ್ಟಡದಲ್ಲಿ ಇರುವ ಎರಡನೇ ಮಹಡಿಯಲ್ಲಿ ಈ ದಂಪತಿ ವಾಸವಾಗಿದ್ದರು. ರಾತ್ರಿ ಎ.ಸಿ.ಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿಯಿಂದಾಗಿ ಉಸಿರುಗಟ್ಟಿ ನಾಲ್ವರು ಮೃತ ಹೊಂದಿದ್ದಾರೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಕುವೈತ್ ನಲ್ಲಿ ವಾಸವಾಗಿದ್ದು, ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ. ಮೃತ ಹೊಂದಿದವರನ್ನು ಮ್ಯಾಥ್ಯೂ ಮುಜಕ್ಕಲ್, ಅವರ ಪತ್ನಿ ಲಿನ್ ಅಬ್ರಹಾಂ ಮತ್ತು ಅವರ ಮಕ್ಕಳಾದ ಐಸಾಕ್ ಮತ್ತು ಎರಿನ್ ಎಂದು ಗುರುತಿಸಲಾಗಿದೆ.
ಮ್ಯಾಥ್ಯೂ ಅವರು ಕಳೆದ 15 ವರ್ಷಗಳಿಂದ ಕುವೈತ್ ನಲ್ಲಿ ಕೆಲಸ ಮಾಡುತ್ತಿದ್ದು, ಅವರ ಪತ್ನಿ ನರ್ಸ್ ಆಗಿದ್ದು, ಮಕ್ಕಳು ಅಲ್ಲಿ ಓದುತ್ತಿದ್ದರು. ಪತ್ತನಂತಿಟ್ಟದಲ್ಲಿರುವ ಸಂತ್ರಸ್ತೆಯ ಕುಟುಂಬಕ್ಕೆ ಮೃತದೇಹಗಳು ತಮ್ಮ ಊರು ತಲುಪಿರುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ದೃಢೀಕರಣವನ್ನು ಪಡೆದಿಲ್ಲ.
ಮ್ಯಾಥ್ಯೂ ಅವರ ತಾಯಿ ಮತ್ತು ಮೂವರು ಒಡಹುಟ್ಟಿದವರನ್ನು ಅಗಲಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಕೊಠಡಿಯಲ್ಲಿ ಅಳವಡಿಸಿದ್ದ ಎಸಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA