ಪುರುಷರ ಐಪಿಎಲ್ ಯಶಸ್ಸಿನ ಹಿನ್ನೆಲೆಯಲ್ಲಿ ಭಾರೀ ಬೇಡಿಕೆ ಇದ್ದ ಮಹಿಳಾ ಐಪಿಎಲ್ ಗೆ ಬಿಸಿಸಿಐ ಪ್ರಕ್ರಿಯೆ ಆರಂಭಿಸಿದ್ದು, 5 ಫ್ರಾಂಚೈಸಿಗಳ ಖರೀದಿಗೆ 400 ಕೋಟಿ ರೂ. ಮೂಲಧನ ನಿಗದಿಪಡಿಸಿದೆ.
2023 ಮಹಿಳಾ ಐಪಿಎಲ್ ಟೂರ್ನಿ ಪಾದರ್ಪಣೆ ಮಾಡಲಿದ್ದು, ಪುರುಷರ ಐಪಿಎಲ್ ಯಶಸ್ಸಿನ ಹಿನ್ನೆಲೆಯಲ್ಲಿ ಮಹಿಳಾ ಐಪಿಎಲ್ ನಲ್ಲೂ ದೊಡ್ಡ ಮೊತ್ತದ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ.
5 ಫ್ರಾಂಚೈಸಿಗಳ ಟೆಂಡರ್ ಆಹ್ವಾನಿಸಲು ಬಿಸಿಸಿಐ ಸಿದ್ಧತೆ ನಡೆಸಿದ್ದು, ಮೂಲಧನ 400 ಕೋಟಿ ರೂ.ನಿಗದಿಪಡಿಸಿದೆ. ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಕೂಡ ಅನುಮೋದನೆ ನೀಡಿದೆ ಎನ್ನಲಾಗಿದೆ.
ಚೊಚ್ಚಲ ಮಹಿಳಾ ಐಪಿಎಲ್ ನಲ್ಲಿ ಲೀಗ್ ಹಂತದಲ್ಲಿ 20 ಪಂದ್ಯಗಳು ನಡೆಯಲಿದ್ದು, ಪ್ರತಿ ತಂಡಗಳು ಎರಡು ಬಾರಿ ಮುಖಾಮುಖಿ ಆಗಲಿವೆ. ಅಗ್ರ 2 ತಂಡಗಳು ನೇರವಾಗಿ ಫೈನಲ್ ಪ್ರವೇಶಿಸಲಿದ್ದರೆ, ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಎಲಿಮಿನೇಟರ್ ಸುತ್ತು ಇರಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy