ಬೆಂಗಳೂರು: ವಿದೇಶದಲ್ಲಿರುವ ಬೆಂಗಳೂರು ಮೂಲದ ವ್ಯಕ್ತಿಗೆ ಸೈಟ್ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಹಣ ಕಳೆದುಕೊಂಡ ವ್ಯಕ್ತಿಯು ಭಾರತೀಯ ಟ್ವಿಟ್ ಮೂಲಕ ದೂರು ನೀಡಿದ್ದಾರೆ.
ರಾಘವೇಂದ್ರ ಪ್ರಸಾದ್ ಎಂಬವರನ್ನು ಜೆಪಿ ನಗರದ ರಿಯಲ್ ಎಸ್ಟೇಟ್ ಕಂಪನಿ ಪರಿಚಯಿಸಿಕೊಂಡಿದೆ. ನಂತರ ಹೂಡಿಕೆ ಮಾಡಿಸಿಕೊಂಡು ಸೈಟ್ ಬುಕ್ ಮಾಡಿದ್ದಾರೆ. ಹಣ ಜಮೆಯಾದ ಬಳಿಕ ಬುಕ್ ಮಾಡಿದ್ದ ಸೈಟ್ ಬೇರೆಯವರಿಗೆ ಮಾರಾಟ ಮಾಡಲಾಗಿದೆ.


