ಜೀವಿತ ಪ್ರಮಾಣಪತ್ರವನ್ನು ನವೀಕರಿಸಲು ಹೋಗಿ ಸೈಬರ್ ಕೈಂ ಆರೋಪಿಗಳನ್ನೇ ಬ್ಯಾಂಕ್ ಸಿಬ್ಬಂದಿ ಎಂದು ನಂಬಿ ಸರ್ಕಾರಿ ದಾಖಲೆಗಳನ್ನು ಹಂಚಿಕೊಂಡ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಬರೊಬ್ಬರಿ 1.27 ಲಕ್ಷ ರೂ. ಗಳನ್ನು ಕಳೆದು ಕೊಂಡಿದ್ದಾರೆ.
ಜೀವಿತ ಪ್ರಮಾಣಪತ್ರ ಎನ್ನುವುದು ಸರ್ಕಾರಿ ನೌಕರರಿಗೆ ಪಿಂಚಣಿ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸಲು ಒದಗಿಸಲಾದ ಬಯೋಮೆಟ್ರಿಕ್–ಸಕ್ರಿಯ ಸೇವೆಯಾಗಿದೆ.
ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


