ಬೆಂಗಳೂರು: ಆಧಾರ್ ಕಾರ್ಡ್ ಹಾಗೂ ಬೆರಳಚ್ಚು ಬಳಸಿ ಬ್ಯಾಂಕ್ ನಲ್ಲಿದ್ದ ಸಾರ್ವಜನಿಕರ ಹಣ ಡ್ರಾ ಮಾಡಿ ವಂಚಿಸುತ್ತಿದ್ದ ಬಿಹಾರದ ನಾಲ್ವರು ಆರೋಪಿಗಳನ್ನು ವಿಶೇಷ ತನಿಖಾ ದಳದ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ರೆಹಮಾನ್, ಅಬುಜರ್, ಆರೀಫ್, ನಾಶೀರ್ ಅಹಮದ್ ಬಂಧಿತರು.
ಈ ವಂಚನೆ ಸಂಬಂಧ 120ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಎಸ್ ಐಟಿ ರಚಿಸಿ, ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು.


