ಬಸ್ ನಿಂದ ಆಟೊ ಕ್ಯಾಬ್‌ಗೆ ತೊಂದರೆ ಇಲ್ಲ: ಶಕ್ತಿ ಯೋಜನೆ ಜಾರಿಯಿಂದಾಗಿ ಆಟೊ ಹಾಗೂ ಕ್ಯಾಬ್ ಚಾಲಕರಿಗೆ ತೊಂದರೆಯಾಗುತ್ತಿರುವ ಕುರಿತು ಯಾವುದೇ ದೂರು ಬಂದಿಲ್ಲ. ಯೋಜನೆ ಜಾರಿಯಾದ ತಕ್ಷಣದಲ್ಲಿ ಅದರ ಪರಿಣಾಮ ಗೊತ್ತಾಗಲ್ಲ. ಹಾಗಾಗಿ ಸ್ವಲ್ಪ ಸಮಯ ನೋಡಿ ಪರಿಶೀಲಿಸಿ, ಒಂದು ವೇಳೆ ನಮ್ಮ ಯೋಜನೆಯಿಂದ ಆಟೊ, ಕ್ಯಾಬ್ ಗಳಿಗೆ ತೊಂದರೆಯಾಗುತ್ತಿದ್ದಲ್ಲಿ ಅವರಿಗೇನು ಮಾಡಬಹುದು ಎಂದು ಪರಿಶೀಲಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.
ವಿಧಾನ ಪರಿಷತ್ ಪ್ರಶೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಬೋಜೇಗೌಡ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ತಿಂಗಳು ಕಾಯೋಣ, ಶಕ್ತಿ ಯೋಜನೆಯಿಂದ ಆಗುವ ಪರಿಣಾಮ ನೋಡಿ ಆಟೊ, ಕ್ಯಾಬ್ ಇತ್ಯಾದಿ ಸಮಸ್ಯೆ ಆಗಿದ್ದಲ್ಲಿ ಪರಿಹಾರಕ್ಕೆ ಕ್ರಮ ವಹಿಸಲಿದ್ದೇವೆ.
ಶಕ್ತಿ ಯೋಜನೆಯಿಂದ ತೊಂದರೆಯಾಗಿದೆ ಎಂದು ಯಾವ ಆಟೊ ಚಾಲಕ ಹಾಗೂ ಚಾಲಕರ ಸಂಘ ನನ್ನನ್ನು ಭೇಟಿ ಆಗಿಲ್ಲ, ಇಲಾಖೆಗೂ ದೂರು ನೀಡಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಬಂದಿದೆ. ಯೋಜನೆ ಜಾರಿಯಾಗಿ ವಾರದಲ್ಲೇ ಎಲ್ಲ ಗೊತ್ತಾಗಲ್ಲ. ಒಂದು ತಿಂಗಳು ಕಾದು ನೋಡಿ ಪರಿಣಾಮ ಪರಿಶೀಲಿಸಿ ನಂತರ ಮುಂದೇನು ಮಾಡಬಹುದೆಂದು ವಿಚಾರಿಸುತ್ತೇವೆ ಎಂದು ಪ್ರತ್ಯುತ್ತರ ನೀಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


