ಹೆಚ್.ಡಿ.ಕೋಟೆ: ಚಿನ್ನಪ್ಪರ ಪಾಳ್ಯ ಗ್ರಾಮದ ಕಮಲ ನಿವಾಸ ಹೆಲ್ತ್ ಸೆಂಟರ್ ನಲ್ಲಿ, ನಯನ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು, ಲಯನ್ಸ್ ಸಂಸ್ಥೆ ಹೆಚ್.ಡಿ.ಕೋಟೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ, ಸಾರ್ವಜನಿಕ ಆಸ್ಪತ್ರೆ ಹೆಚ್. ಡಿ.ಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಸಂತ ವನ ಚಿನ್ನಪ್ಪರ ದೇವಾಲಯದ ಫಾದರ್ ಜಾಯ್ , ಲಯನ್ ಸಂಸ್ಥೆ ಅಧ್ಯಕ್ಷರಾದ ಈರೇಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ಸೋಮಣ್ಣ, ನಯನ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಪ್ರದೀಪ್ ಪ್ರಭು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದ್ದರು
ಈ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ ಮಾತನಾಡಿ, ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿರುವುದು, ಜನರಿಗೆ ತುಂಬಾ ಅನುಕೂಲಕರವಾಗಿದೆ, ಈ ಶಿಬಿರದಲ್ಲಿ ಉಚಿತ ಬಿಪಿ, ಶುಗರ್ ತಪಾಸಣೆ, ವೈದ್ಯರ ಸಲಹೆ ಮೇರೆಗೆ ಉಚಿತ ಇ.ಸಿ.ಜಿ. ತಪಾಸಣೆ, ಕೀಲು ಮತ್ತು ಮೂಳೆ ರೋಗ ತಪಾಸಣೆ ,ಮಕ್ಕಳ ಆರೋಗ್ಯತಪಾಸಣೆ,ಮಾಡುತ್ತಾರೆ. ಆದುದರಿಂದ ಇಲ್ಲಿ ಆಗಮಿಸಿರುವ ಈ ಭಾಗದ ಜನರು ಶಿಬಿರವನ್ನು ಹೆಚ್ಚಿನ ರೀತಿಯಲ್ಲಿ ಸದುಪಯೋಗಪಡಿಸಿ ಕೊಳ್ಳಬೇಕೆಂದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷ ಈರೇಗೌಡ ಮಾತನಾಡಿ, ಈ ಭಾಗದ ಜನರಿಗೆ ಆರೋಗ್ಯ ಕಾಪಾಡುವ ಹಿತ ದೃಷ್ಟಿಯಿಂದ ಆರೋಗ್ಯ ಇಲಾಖೆ ಜೊತೆಗೂಡಿ ಲಯನ್ ಸಂಸ್ಥೆಯು ಈ ಶಿಬಿರವನ್ನು ಆಯೋಜಿಸಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಪಾಸಣೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು.
ಶಿಬಿರದಲ್ಲಿ ಲಯನ್ ಸಂಸ್ಥೆಯ ಸುರೇಂದ್ರ ಗೌಡ, ಬಸವರಾಜ್, ನಾರಾಯಣಗೌಡ, ನಾಗರಾಜ್, ಭಾಸ್ಕರ್, ನಾಗನಾಯಕ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ರಾಮಚಂದ್ರ ನಾಯಕ್, ರವಿರಾಜ್, ಪ್ರತಾಪ್, ಧ್ರುವ, ಪ್ರಮೋದ್, ನಾರಾಯಣ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ತೇಜಸ್, ಡಾ.ಶಾಲಿನಿ ಡಾ.ಪ್ರಕಾಶ್, ಡಾ. ಮಮತಾ ಮತ್ತು ಸಿಬ್ಬಂದಿ ವರ್ಗ, ಕಮಲ ನಿವಾಸ ಹೆಲ್ತ್ ಸೆಂಟರ್ ನ ಮುಖ್ಯಸ್ಥರಾದ ಸೈರಿನ್ , ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಹಾಜರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


