ಸರಗೂರು: ಸಹಕಾರ ಸಂಘಗಳಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ಅವಕಾಶ ನೀಡಿದರೆ ಸಹಕಾರ ಸಂಘಗಳ ಬಾಗಿಲನ್ನು ಮುಚ್ಚಬೇಕಾಗುತ್ತದೆ ಎಂದು ಹೇಳಿರುವ ಶಾಸಕ ಜಿ.ಟಿ.ದೇವೇಗೌಡರ ಹೇಳಿಕೆಯನ್ನು ಮಾಜಿ ಎಪಿಎಂಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ದೇವಲಾಪುರ ಸಿದ್ದರಾಜು ಖಂಡಿಸುತ್ತೇವೆ ಎಂದರು.
ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾದ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ–2025ರ ಮೇಲಿನ ಚರ್ಚೆಯ ವೇಳೆ ಜೆಡಿಎಸ್ ನ ಜಿ.ಟಿ.ದೇವೇಗೌಡ ಅವರು, ‘ಸಹಕಾರ ಸಂಘಗಳ ನಿರ್ದೇಶಕರ ಹುದ್ದೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಮೀಸಲಾತಿ ಅಡಿ ನಾಮನಿರ್ದೇಶನ ಮಾಡುವ ಕ್ರಮ ಸರಿಯಲ್ಲ. ಇದರಿಂದ ಸಹಕಾರ ಸಂಘಗಳನ್ನು ಮುಚ್ಚುವ ಸ್ಥಿತಿ ಬರುತ್ತದೆ’ ಎಂದಿದ್ದಾರೆ.ಅದರೆ ಜಿಟಿ ದೇವೇಗೌಡ ಎಸ್ಸಿ ಎಸ್ಟಿ ಸಮುದಾಯದಗಳಿಂದ ಮತಗಳಿಂದ ಇವರು ವಿಧಾನಸಭಾ ಸೇರಿರುವುದು ಜಿಟಿ ದೇವೇಗೌಡ ರವರಿಗೆ ಆತ್ಮ ಸಾಕ್ಷಿ ಎಂಬಂತೆ ಮಾತನಾಡಿರುವುದು ಸರಿಯಲ್ಲ ಎಂದರು.
ಸಹಕಾರ ಸಂಘಗಳಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ನಾಮ ನಿರ್ದೇಶಿತ ಸದಸ್ಯರ ಸ್ಥಾನ ನೀಡುವುದು ಸರಿಯಲ್ಲ ಎಂಬ ಹೇಳಿಕೆ ಖಂಡನೀಯ ‘ಜಿ.ಟಿ.ದೇವೇಗೌಡ ಅವರ ಮಾತುಗಳು ಸಹ್ಯವಲ್ಲ. ಈ ಮಾತು ಸ್ವಲ್ಪವೂ ಸರಿಯಿಲ್ಲ. ದಲಿತರಿಗೆ ಅವಕಾಶ ಸಿಗುವುದು ಬೇಡವೇ? ಈ ಮಸೂದೆಯಲ್ಲಿ ಸಮಸ್ಯೆಗಳು ಇದ್ದರೆ ಅದನ್ನು ತಿಳಿಸಿ. ಬದಲಿಗೆ ದಲಿತರನ್ನು ಸಹಕಾರ ಸಂಘಗಳಿಗೆ ನೇಮಕ ಮಾಡುವುದರಿಂದ, ಅವುಗಳನ್ನು ಮುಚ್ಚುವ ಸ್ಥಿತಿ ಬರುತ್ತದೆ ಎಂಬಂತಹ ಮಾತುಗಳನ್ನು ಆಡಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಹಕಾರ ಕೇತ್ರವು ಸಂವಿಧಾನಬದ್ಧವಾಗಿದ್ದು, ಇಂದಿನ ಸರಕಾರ ಸಾಮಾಜಿಕ ಬದ್ಧತೆಯಿಂದ ಎಸ್‌ಸಿ, ಎಸ್‌ಟಿ ಅವರನ್ನು ಸಹಕಾರ ಕೇತ್ರಕ್ಕೆನಾಮನಿರ್ದೇಶನ ಮಾಡುತ್ತಿದೆ. ಇದನ್ನು ಸಹಿಸದ ಶಾಸಕ ಜಿ.ಟಿ.ದೇವೇಗೌಡ, ಜಿ.ಡಿ.ಹರೀಶ್‌ಗೌಡ ಈ ಇಬ್ಬರು ಅಧಿವೇಶನದಲ್ಲಿ ಪ್ರಬಲವಾಗಿ ವಿರೋಧಿಸಿರುವುದು ಖಂಡನೀಯ ವಾಗಿದೆ. ಕೂಡಲೇ ಇವರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು,” ಎಂದು ಒತ್ತಾಯಿಸಿದರು.
ಸಹಕಾರ ಕೇತ್ರಕ್ಕೆ ದಲಿತರು ಬೇಡ ಎಂದ ಮೇಲೆ ಮುಂದಿನ ದಿನಗಳಲ್ಲಿ ದಲಿತರ ವೋಟು ಸಹ ಬೇಡಎಂದು ಶಾಸಕ ಜಿ.ಟಿ.ದೇವೇಗೌಡ ಅವರು ಹೇಳಬೇಕು ಎಂದು ಪತ್ರಿಕೆ ಹೇಳಿಕೆಯಲ್ಲಿ ಕಿಡಿಕಾರಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC