ಬೆಳಗಾವಿ: ಗಾಳಿಪಟ ಹಾರಿಸುವಾಗ ಆಯತಪ್ಪಿ ಕಟ್ಟಡ ಮೇಲಿಂದ ಬಿದ್ದು 11 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಉಜ್ವಲ್ ನಗರದ ತಿರಂಗಾ ಕಾಲೋನಿಯ ಅರ್ಮಾನ್ ದಫೆದಾರ್(11) ಮೃತ ಬಾಲಕ. ನಿನ್ನೆ ಅಶೋಕ ನಗರದ ತಮ್ಮ ಸಂಬಂಧಿಕರ ಮನೆಗೆ ಕುಟುಂಬಸ್ಥರ ಜೊತೆಗೆ ಬಾಲಕ ಬಂದಿದ್ದನು. ಈ ವೇಳೆ ಅಣ್ಣನ ಜೊತೆಗೆ ಗಾಳಿಪಟ ಹಾರಿಸಲು ಕಟ್ಟಡದ ಟೆರಸ್ ಮೇಲೆ ಹೋಗಿದ್ದಾನೆ.
ಈ ವೇಳೆ ಗಾಳಿಪಟ ಹಾರಿಸುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅರ್ಮಾನ್ ಇಂದು ಕೊನೆಯುಸಿರೆಳೆದಿದ್ದಾನೆ.
ಮಗನ ಕಳೆದುಕೊಂಡ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


