ಕೋಲ್ಕತ್ತಾ: ಅಖಿಲ ಭಾರತೀಯ ಹಿಂದೂ ಮಹಾಸಭಾ ಆಯೋಜಿಸಿದ್ದ ದುರ್ಗಾ ಪೂಜಾ ಪೆಂಡಾಲ್ ನಲ್ಲಿ ಮಹಾತ್ಮ ಗಾಂಧಿಯನ್ನು ಮಹಿಷಾಸುರನಾಗಿ ಪ್ರದರ್ಶಿಸಿದ್ದ ಘಟನೆ ಕೋಲ್ಕತ್ತಾದ ಪೂರ್ವ ಅಂಚಿನಲ್ಲಿರುವ ಕಸ್ಬಾದಲ್ಲಿ ನಡೆದಿದೆ. ಈ ಘಟನೆ ಇದೀಗ ಭಾರೀ ವಿವಾದವನ್ನು ಹುಟ್ಟುಹಾಕಿದೆ.
ಅಖಿಲ ಭಾರತೀಯ ಹಿಂದೂ ಮಹಾಸಭಾದ ಪೂಜೆಯಲ್ಲಿ ಮಹಿಷಾಸುರನ ಮುಖವು ಮಹಾತ್ಮ ಗಾಂಧಿಯವರ ಮುಖವನ್ನು ಹೋಲುವಂತೆ ಮಾಡಲಾಗಿದೆ.
ಈ ಸುದ್ದಿ ಬಹಿರಂಗವಾಗುತ್ತಿದ್ದಂತೇ ಅಲ್ಲಿನ ಆಡಳಿತವು ತರಾತುರಿಯಲ್ಲಿ ಪೂಜಾ ಸಂಘಟಕರನ್ನು ತಲುಪಿದ್ದು ವಿಗ್ರಹವನ್ನು ಬದಲಾಯಿಸುವಂತೆ ಒತ್ತಾಯಿಸಿದೆ. ಪೊಲೀಸರು ಮತ್ತು ಆಡಳಿತದ ಒತ್ತಡಕ್ಕೆ ಮಣಿದು ಪೂಜೆ ಸಂಘಟಕರು ಗಾಂಧಿ ವೇಷಭೂಷಣದಲ್ಲಿ ತಯಾರಿಸಿದ ವಿಗ್ರಹವನ್ನು ಬದಲಾಯಿಸಿದ್ದು, ಅದೇ ಜಾಗಕ್ಕೆ ಮಹಿಷಾಸುರನ ರೂಪದ ವಿಗ್ರಹವನ್ನು ಸ್ಥಾಪಿಸಿದ್ದಾರೆ.
ದುರ್ಗಾಪೂಜೆಯಲ್ಲಿ ಗಾಂಧಿಯನ್ನು ಮಹಿಷಾಸುರನಂತೆ ತೋರಿಸಲಾಗಿದೆ ಎಂಬ ಸುದ್ದಿ ವಾಹಿನಿಗಳಲ್ಲಿ ಪ್ರಕಟವಾಗಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy