ತಮಿಳುನಾಡಿನ ಖಾಸಗಿ ಕಂಪನಿಯಲ್ಲಿ ಅನಿಲ ಸೋರಿಕೆಯಾಗಿದ್ದು, ಅಮೋನಿಯಾ ಗ್ಯಾಸ್ ಸೇವಿಸಿದ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಣ್ಣೂರು ಮೂಲದ ‘ಕೋರೊಮ್ಯಾಂಡಲ್ ಇಂಟರ್‌ನ್ಯಾಶನಲ್ ಲಿಮಿಟೆಡ್’ ಎಂಬ ರಸಗೊಬ್ಬರ ತಯಾರಿಕಾ ಕಂಪನಿಯಲ್ಲಿ ಈ ಘಟನೆ ನಡೆದಿದೆ.
ಮಧ್ಯರಾತ್ರಿ ಸುಮಾರಿಗೆ ಅನಿಲ ಸೋರಿಕೆ ಸಂಭವಿಸಿದೆ ಎಂದು ವರದಿಯಾಗಿದೆ. ಕಂಪನಿಯ ಪೈಪ್ ಲೈನ್ ನಿಂದ ಅಮೋನಿಯಾ ಅನಿಲ ಸೋರಿಕೆಯಾಗುತ್ತಿದೆ. ಪೈಪ್ ಲೈನ್ ನ ಪೂರ್ವ ಕೂಲಿಂಗ್ ಕಾರ್ಯಾಚರಣೆಯ ಸಂದರ್ಭದಲ್ಲಿ ಅನಿಲ ಸೋರಿಕೆ ಸಂಭವಿಸಿದೆ. ಅನಿಲ ಸೋರಿಕೆಯಿಂದಾಗಿ ಪೆರಿಯಕುಪ್ಪಂ ಮತ್ತು ಚಿನ್ನಕುಪ್ಪಂ ಗ್ರಾಮಗಳಲ್ಲಿ ಭೀತಿ ಉಂಟಾಗಿದೆ.
ಪೊಲೀಸರು ಹಾಗೂ ಜಿಲ್ಲಾಡಳಿತ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಿದರು. ಉಸಿರಾಟದ ತೊಂದರೆ ಮತ್ತು ದೈಹಿಕ ಸ್ಥಿತಿಯಿಂದ 12 ಜನರನ್ನು ಸ್ಟಾನ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ತೃಪ್ತಿಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಂಪನಿಯು ರಾತ್ರಿ ವೇಳೆ ಅನಿಲ ಸೋರಿಕೆಯನ್ನು ನಿಯಂತ್ರಣಕ್ಕೆ ತಂದಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.


