ಜನರಲ್ ಉಪೇಂದ್ರ ದ್ವಿವೇದಿ ಅವರು ದೇಶದ 30ನೇ ಸೇನಾಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಚೀನಾ, ಪಾಕಿಸ್ತಾನ್ ಗಡಿ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿರುವ ಅವರು ಎಲ್.ಎ.ಸಿ. ಸೇರಿದಂತೆ ಹಲವೆಡೆ ಭಾರತ ಸವಾಲು ಎದುರಿಸುತ್ತಿರುವ ವೇಳೆ ಅಧಿಕಾರ ವಹಿಸಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ.
ಈ ಮೊದಲು ಅಧಿಕಾರದಲ್ಲಿದ್ದ ಮನೋಜ್ ಪಾಂಡೆ ಅವರು 4 ದಶಕಗಳ ಸೇವೆ ಬಳಿಕ ನಿವೃತ್ತರಾಗಿದ್ದು, ಅವರ ಸ್ಥಾನವನ್ನು ದ್ವಿವೇದಿ ಅಲಂಕರಿಸಿದ್ದಾರೆ. ಫೆ.19ರಿಂದ ಅವರು ಸೇನೆಯ ಉಪ ಮುಖ್ಯಸ್ಥರಾಗಿದ್ದರು. ಅದಕ್ಕೂ ಮುನ್ನ 2 ವರ್ಷ ಕಾಲ ಉತ್ತರ ಕಮಾಂಡ್ ನ ಮುಖ್ಯಸ್ಥರಾಗಿದ್ದರು.
ಇನ್ನು ನೌಕಾಪಡೆಯ ಹಾಲಿ ಮುಖ್ಯಸ್ಥ ಅಡ್ಡಿರಲ್ ದಿನೇಶ್ ತ್ರಿಪಾಠಿ ಅವರು ಉಪೇಂದ್ರ ದ್ವಿವೇದಿ ಅವರ ಕ್ಲಾಸ್‌ಮೇಟ್ ಆಗಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. 1970ರಲ್ಲಿ ಇಬ್ಬರೂ ಮಧ್ಯಪ್ರದೇಶದ ರೇವಾದ ಸೈನಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA