ಸೇಂಟ್ ಪಾಲ್(ಅಮೆರಿಕ): ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದ ಫೆಡರಲ್ ವಿಚಾರಣೆಗೆಂದು ನೇಮಿಸಲಾದ 18 ಮಂದಿ ಜ್ಯೂರಿಗಳ ತಂಡದಲ್ಲಿ ಹೆಚ್ಚಿನ ಶ್ವೇತ ವರ್ಣೀಯರನ್ನು ಆಯ್ಕೆ ಮಾಡಲಾಗಿದೆ.
ಈ ಜ್ಯೂರಿಗಳನ್ನು ಟೌ ತಾವೋ, ಥಾಮಸ್ ಲೇನ್ ಮತ್ತು ಜೆ.ಕುಯೆಂಗ್ ಈ ಅಧಿಕಾರಿಗಳ ವಿರುದ್ಧದ ತನಿಖೆಗಾಗಿ ನೇಮಿಸಲಾಗಿದೆ. 12 ಜ್ಯೂರಿಗಳ ಪೈಕಿ ಓರ್ವ ಏಷ್ಯನ್ ಮೂಲದವರೂ ಸೇರಿದ್ದಾರೆ.
ಯಾವುದೇ ಪರ್ಯಾಯ ವ್ಯಕ್ತಿಗಳ ಅಗತ್ಯವಿಲ್ಲದಿದ್ದರೆ ಏಷ್ಯನ್ ಮೂಲದ ಎರಡನೇ ವ್ಯಕ್ತಿಯು ಆರು ಬದಲಿ ಜ್ಯೂರಿಗಳಲ್ಲಿರಲಿದ್ದಾರೆ. ಉಳಿದೆಲ್ಲರೂ ಶ್ವೇತ ವರ್ಣೀಯರಾಗಿದ್ದಾರೆ. ನ್ಯಾಯಾಲಯವು ಜನಾಂಗೀಯ ಮಾಹಿತಿ ನೀಡಲು ನಿರಾಕರಿಸಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy